ADVERTISEMENT

ಕೋಲಾರ | ಕೆಜಿಎಫ್‌: ಕೋವಿಡ್‌–19 ವಾರ್ಡ್‌ಗೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 16:38 IST
Last Updated 11 ಜುಲೈ 2020, 16:38 IST
ಕೆಜಿಎಫ್‌ ಚಾಂಪಿಯನ್‌ ರೀಫ್ಸ್‌ ಬಿಜಿಎಂಎಲ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು
ಕೆಜಿಎಫ್‌ ಚಾಂಪಿಯನ್‌ ರೀಫ್ಸ್‌ ಬಿಜಿಎಂಎಲ್ ಆಸ್ಪತ್ರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು   

ಕೆಜಿಎಫ್‌: ನಗರದಲ್ಲಿ ಕೋವಿಡ್‌- 19 ರೋಗಿಗಳಿಗೆ ಚಿಕಿತ್ಸೆ ನೀಡಲು 50 ಹಾಸಿಗೆಗಳ ವಾರ್ಡ್‌ ಪ್ರಾರಂಭಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಬಿಜಿಎಂಎಲ್‌ ಆಸ್ಪತ್ರೆ ಮತ್ತು ಸಂಭ್ರಮ್‌ ವೈದ್ಯಕೀಯ ಕಾಲೇಜನ್ನು ಪರಿಶೀಲನೆ ಮಾಡಿದರು.

ಬಿಜಿಎಂಎಲ್‌ ಆಸ್ಪತ್ರೆಗೆ ಭೇಟಿ ನೀಡಿದ ಅಧಿಕಾರಿಗಳಿಗೆ ಬಿಜಿಎಂಎಲ್‌ ಭದ್ರತಾ ಅಧಿಕಾರಿ ಪನ್ಸಂಬಾಲ್‌ ವಸ್ತುಸ್ಥಿತಿಯನ್ನು ವಿವರಿಸಿದರು. ಸುಮಾರು ಎರಡು ದಶಕಗಳಿಂದ ಮುಚ್ಚಿರುವ ಆಸ್ಪತ್ರೆಯನ್ನು ದುರಸ್ತಿ ಮಾಡಲು ಕೋಟಿಗಟ್ಟಲೆ ಹಣ ಬೇಕಾಗು ತ್ತದೆ ಎಂದು ಮಾಹಿತಿ ನೀಡಿದರು.

ನಂತರ ಸಂಭ್ರಮ್‌ ವೈದ್ಯಕೀಯ ಕಾಲೇಜಿಗೆ ತೆರಳಿದ ಅಧಿಕಾರಿಗಳು ಆಸ್ಪತ್ರೆಯ ಸೌಕರ್ಯವನ್ನು ಪರಿಶೀ ಲಿಸಿದರು. ಸುಮಾರು 650 ಹಾಸಿಗೆಗಳ ಆಸ್ಪತ್ರೆಯ ಒಂದು ಭಾಗವನ್ನು ಕೋವಿಡ್‌– 19ಕ್ಕೆ ಉಪಯೋಗಿಸಿ ಕೊಳ್ಳ ಬ ಹುದು. ಆದರೆ ಅಷ್ಟು ದೊಡ್ಡ ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ಕೊರತೆಯನ್ನು ಹೇಗೆ ತುಂಬುವುದು ಎಂಬ ಪ್ರಶ್ನೆ ಅಧಿಕಾರಿಗಳಿಗೆ ಎದುರಾಗಿದೆ.

ADVERTISEMENT

ತಾತ್ಕಾಲಿಕವಾಗಿ ರಾಬರ್ಟ್‌ ಸನ್‌ಪೇಟೆಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 3 ವಾರ್ಡ್‌ಗಳನ್ನು ಪ್ರತ್ಯೇಕವಾಗಿರಿಸಿ ಅಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.