
ಪ್ರಜಾವಾಣಿ ವಾರ್ತೆ
ಸಂಗ್ರಹ ಚಿತ್ರ
ಕೆಜಿಎಫ್: ಬೆಮಲ್ ಸಮುದಾಯ ಸಂಘಟನೆ ವತಿಯಿಂದ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ಅಂಗವಾಗಿ ಬೆಮಲ್ ಕ್ರೀಡಾಂಗಣದಲ್ಲಿ ಭಾನುವಾರ ಬೆಳಗ್ಗೆ 10ಕ್ಕೆ ‘ಸೌಹಾರ್ದತೆಗಾಗಿ ಗಾಳಿಪಟ’ ಉತ್ಸವ ನಡೆಯಲಿದೆ.
ಬೆಮಲ್ ಕಾರ್ಮಿಕ ಕಲ್ಯಾಣ ನಿಧಿಯ ಶಶಿಕಾಂತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಆಸಕ್ತರು ಗಾಳಿ ಪಟ ಹಾರಿಸಬಹುದು. ಸೀಮಿತ ಗಾಳಿ ಪಟಗಳು ಮತ್ತು ದಾರಗಳನ್ನು ಕೂಡ ಮಾರಾಟಕ್ಕೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.