ADVERTISEMENT

ಕೆಜಿಎಫ್: ಎಸ್‌ಪಿ ಇನ್‌ಸ್ಟಾ ಖಾತೆ ನಕಲು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 7:37 IST
Last Updated 31 ಆಗಸ್ಟ್ 2025, 7:37 IST
ಇನ್‌ಸ್ಟಾ ಗ್ರಾಂ ಖಾತೆ ನಕಲಿ
ಇನ್‌ಸ್ಟಾ ಗ್ರಾಂ ಖಾತೆ ನಕಲಿ   

ಕೆಜಿಎಫ್‌: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ ಅವರ ಭಾವಚಿತ್ರ ಇರುವ ಜಿಲ್ಲಾ ಪೊಲೀಸ್‌ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯನ್ನು ನಕಲು ಮಾಡಿದ ಘಟನೆ ನಡೆದಿದೆ.

ನಕಲಿ ಖಾತೆಯನ್ನು ಎಸ್‌ಪಿ– ಕೆಜಿಎಫ್‌ ಎಂಬ ಹೆಸರಿನಲ್ಲಿ ತೆರೆಯಲಾಗಿದೆ. ಈ ಖಾತೆಯ ಪ್ರೊಫೈಲ್‌ನಲ್ಲಿ ಎಸ್‌ಪಿ ಭಾವಚಿತ್ರವನ್ನೂ ಬಳಸಲಾಗಿದೆ. ನಕಲಿ ಖಾತೆಯನ್ನು 119 ಮಂದಿ ಫಾಲೊ ಮಾಡುತ್ತಿದ್ದು, ಈಗಾಗಲೇ22 ಫಾಲೊವರ್ಸ್ ಇದ್ದಾರೆ. ಈ ಖಾತೆಯನ್ನು ಬ್ಲಾಕ್ ಮಾಡಬೇಕು ಮತ್ತು ಯಾರೂ ಸಹ ಈ ಖಾತೆಯನ್ನು ಫಾಲೊ ಮಾಡಬಾರದು ಎಂದು ಎಸ್‌ಪಿ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಕೋರಿಕೊಂಡಿದ್ದಾರೆ. 

ಈಚೆಗೆ ಮನೆ ಮನೆಗೆ ಪೊಲೀಸ್‌ ಎಂಬ ಕಾರ್ಯಕ್ರಮವನ್ನು ಇಲಾಖೆ ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಧಿಕೃತ ವಿಡಿಯೊಗಳನ್ನು ಎಡಿಟ್‌ ಮಾಡಿದ ಕಿಡಿಗೇಡಿಗಳು, ಅದಕ್ಕೆ ಅಶ್ಲೀಲಕರ ಸಂಭಾಷಣೆ ಹೊಂದಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಸಿಇಎನ್‌ ಪೊಲೀಸರು ವಿಡಿಯೊ ಪೋಸ್ಟ್‌ ಮಾಡಿದ್ದ ಮೈಸೂರು ನಗರದ ಗೌಸ್‌ ಮತ್ತು ಸಿದ್ದಿಕ್‌ ಎಂಬುವರನ್ನು ಬಂಧಿಸಿದ್ದರು.

ADVERTISEMENT

ಈ ಪ್ರಕರಣದ ಬೆನ್ನಲ್ಲೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರ ಖಾತೆಯನ್ನೇ ನಕಲಿ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.