ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿಯಿಂದ ಬುಧವಾರ ಡಿ.ದೇವರಾಜ ಅರಸು ಅವರ 110 ನೇ ಜಯಂತಿ ಆಚರಿಸಲಾಯಿತು.
ಅಧಿಕಾರಿಗಳು, ಮುಖಂಡರು ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅರಸು ಅವರ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಲಾಯಿತು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮಾತನಾಡಿ, ‘ರಾಜಕೀಯ ವ್ಯವಸ್ಥೆಯಲ್ಲಿ ಸಂಖ್ಯಾಬಲ ಹಾಗೂ ಬಲಕ್ಕೆ ಆದ್ಯತೆ ಸಹಜ. ಆದರೆ ದೇವರಾಜ ಅರಸು ಅವರ ಸಮುದಾಯ ಚಿಕ್ಕದಾದರೂ ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರರಾಗಿದ್ದರು’ ಎಂದರು.
‘ಸಂಕಲ್ಪ ಶುದ್ಧಿ ಹಾಗೂ ಉತ್ತಮ ವ್ಯಕ್ತಿತ್ವ ಅರಸು ಅವರ ಯಶಸ್ಸಿಗೆ ಕಾರಣವಾಗಿದ್ದವು. ಬಡವರ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಭೂ ಸುಧಾರಣೆ ಇತಿಹಾಸವನ್ನೇ ಸೃಷ್ಟಿಸಿತು. ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಯಿಂದಾಗಿ ಭೂರಹಿತ ಗೇಣ ದಾರರು ಭೂಮಿ ಪಡೆಯಲು ಸಾಧ್ಯವಾಯಿತು. ಸಂದಿಗ್ದ ಪರಿಸ್ಥಿತಿಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಗೆ ದಿಕ್ಕು ದೆಸೆ ತೋರಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.
ಹಿಂದುಳಿದ ವರ್ಗಗಗಳ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನಕುಮಾರ್, ಕೋಮುಲ್ ನಿರ್ದೇಶಕ ಕೆ.ಕೆ.ಮಂಜುನಾಥರೆಡ್ಡಿ, ತಾಲ್ಲೂಕು ಹಿಂದುಳಿದ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಎಸ್.ವೇಣುಗೋಪಾಲ್, ಕುರಬ ಸಮುದಾಯದ ತಾಲೂಕು ಅಧ್ಯಕ್ಷ ಎಂ.ವೇಮಣ್ಣ, ವಿಶ್ವಕರ್ಮ ಸಮುದಾಯದ ತಾಲೂಕು ಅಧ್ಯಕ್ಷ ಕೆ.ಮೋಹನಾಚಾರಿ, ಗಾಣಿಗ ಸಮುದಾಯದ ಮುಖಂಡ ಎಂ.ಶ್ರೀನಿವಾಸ್, ಮಡಿವಾಳ ಸಂಘದ ಮುಖಂಡ ಮಂಜು, ಕುರಬರ ಸಂಘ ಮುಖಂಡ .ಮಂಜು, ನೇಕಾರರ ಸಂಘದ ಮುಖಂಡ ಎಸ್.ಎನ್.ಶಂಕರ್, ಗೊಲ್ಲ ಸಮುದಾಯದ ಮುಖಂಡ ಆಟೋ ಜಗದೀಶ್, ರಾಷ್ಟ್ರೀಯ ಮಾನವ ಹಕ್ಕುಗಳ ಜಾಗೃತಿ ಹಾಗೂ ಭ್ರಷ್ಟಾಚಾರ ನಿರ್ಮೂಲ ಸಂಸ್ಥೆಯ ತಾಲೂಕು ಅಧ್ಯಕ್ಷ ಕೆ.ಎಲ್. ಕಾರ್ತಿಕ್, ತಾಲೂಕು ಕಚೇರಿ ಎಫ್. ಡಿ. ಎ. ಅಭಿಷೇಕ್, ಹಿಂದುಳಿದ ವರ್ಗಗಗಳ ವಸತಿ ನಿಲಯಗಳ ಮೇಲ್ವಿಚಾರಕರಾದ ಎಸ್.ರಾಜೇಶ್ವರಿ,ಕೆ. ಲತಾ, ವರಲಕ್ಷ್ಮಿ,, ರವಣಪ್ಪ, ಮಂಜುನಾಥ್, ಜಯಕುಮಾರ್ , ಕಚೇರಿ ಸಿಬ್ಬಂದಿ ಅವಿನಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.