
ಕೋಲಾರ: ಜಿಲ್ಲೆಯಲ್ಲಿ ಆಟೊ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಆರ್‌ಟಿಒ ವೇಣುಗೋಪಾಲರೆಡ್ಡಿ ತಿಳಿಸಿದ್ದಾರೆ.
ಇಂಧನ, ಎಲ್‍ಪಿಜಿ, ಆಟೊ ಮೊಬೈಲ್ ಬಿಡಿಭಾಗಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಭೆಯಲ್ಲಿ ಚರ್ಚಿಸಿ ಆಟೊ ಪ್ರಯಾಣ ದರದ ಏರಿಕೆ ತೀರ್ಮಾನ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಮೂವರು ಪ್ರಯಾಣಿಕರಿಗೆ ಮೊದಲ 2.25 ಕಿ.ಮೀ ಪ್ರಯಾಣಕ್ಕೆ ₹32 ನಿಗದಿ ಮಾಡಲಾಗಿದೆ. ನಂತರದ ಪ್ರತಿ ಕಿ.ಮೀಗೆ ₹ 16 ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗಿದೆ. ಮೊದಲ 5 ನಿಮಿಷ ಆಟೊ ಚಾಲಕರು ಉಚಿತವಾಗಿ ಕಾಯಲಿದ್ದು, ನಂತರದ ಪ್ರತಿ 15 ನಿಮಿಷಕ್ಕೆ ₹ 2 ಪಾವತಿಸಬೇಕಿದೆ. ಮೊದಲ 20 ಕೆ.ಜಿ ತೂಕದ ಲಗೇಜ್ ಉಚಿತವಾಗಿದ್ದು, ನಂತರದ ಪ್ರತಿ 20 ಕೆ.ಜಿಗೆ ₹ 4 ಅನ್ನು ಪ್ರಯಾಣಿಕರು ಕೊಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಆಟೊ ಚಾಲಕರು ಪಡೆಯುವ ಹಣ ನಿಗದಿತ ದರದ ಒಂದೂವರೆ ಪಟ್ಟಿಗಿಂತ ಹೆಚ್ಚಿರಬಾರದು. ಆಟೊ ಪ್ಲಾಗ್ ಮೀಟರ್ ಹೊಂದಿರಬೇಕು. ಅಳತೆ ಮತ್ತು ತೂಕ ಇಲಾಖೆಗೆ ಪರಿಷ್ಕರಣಾ ದರವನ್ನು ಕಳುಹಿಸಿ ವಾರದೊಳಗೆ ಆಟೊ ಪ್ರಯಾಣ ದರವನ್ನು ಅಳವಡಿಸಿಕೊಳ್ಳಬೇಕು. ನಿಗದಿತ ಪರಿಷ್ಕೃತ ದರದ ಪಟ್ಟಿಯನ್ನು ಆಟೊದ ಪ್ರಮುಖ ಜಾಗದಲ್ಲಿ ಪ್ರದರ್ಶಿಸಬೇಕು. ಫೆ.1ರಿಂದ ಆಟೊಗಳ ಮೀಟರ್ ತಪಾಸಣೆ ನಡೆಯಲಿದ್ದು, ಸಮರ್ಪಕ ಮೀಟರ್ ಹೊಂದಿರದ ಆಟೊಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.