ಕೋಲಾರ: ಕೋಲಾರ ನಗರಕ್ಕೆ ರಿಂಗ್ ರಸ್ತೆ ನಿರ್ಮಾಣ ಸಂಬಂಧ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲು ₹2.84 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದ್ದು, ಮೌಲ್ಯಮಾಪನ ನಡೆಸಲಾಗುತ್ತಿದೆ.
ಈ ಸಂಬಂಧ ರೂಪುರೇಷೆ ಕುರಿತು ಶಾಸಕ ಕೊತ್ತೂರು ಮಂಜುನಾಥ್, ಸಂಸದ ಎಂ.ಮಲ್ಲೇಶ್ ಬಾಬು ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಗುರುವಾರ ಸುದೀರ್ಘ ಚರ್ಚೆ ನಡೆಸಿದರು.
ನಗರದ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ನಡೆದ ಪ್ರಾಥಮಿಕ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ರಿಂಗ್ ರಸ್ತೆ ವ್ಯಾಪ್ತಿ, ಅಲೈನ್‌ಮೆಂಟ್, ನಿರ್ಮಾಣ ಸಂಬಂಧ ವಿವಿಧ ಆಯ್ಕೆಗಳು, ಭೂಸ್ವಾಧೀನ, ವೆಚ್ಚಗಳು, ಎದುರಾಗುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.
ಕೊತ್ತೂರು ಮಂಜುನಾಥ್ ಮಾತನಾಡಿ, ‘ಮುಂದಿನ 25 ವರ್ಷಗಳ ದೃಷ್ಟಿಕೋನ ಗಮನದಲ್ಲಿಟ್ಟುಕೊಂಡು ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಹಿಂದೆ ಇದ್ದ ಸಂಚಾರ ದಟ್ಟಣೆ, ಇವತ್ತಿನ ದಟ್ಟಣೆ, ಮುಂದೆ ಉಂಟಾಗಬಹುದಾದ ದಟ್ಟಣೆ ಗಮನದಲ್ಲಿ ಇಟ್ಟುಕೊಳ್ಳಬೇಕು. ನಾಲ್ಕು ಪಥ ರಸ್ತೆ ಮಾಡಬೇಕು. ಮತ್ತೆ ನಾಲ್ಕು ಪಥ ವಿಸ್ತರಣೆಗೆ ಜಾಗ ಇರಬೇಕು’ ಎಂದರು.
ರಿಂಗ್ ರಸ್ತೆ ನಿರ್ಮಾಣ ಸಂಬಂಧ ಮೊದಲು ಸ್ಯಾಟಲೈಟ್ ಮ್ಯಾಪ್ ಮಾಡಿ ಬಳಿಕ ಚರ್ಚಿಸೋಣ. ಆಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸೋಣ ಎಂದು ತಿಳಿಸಿದರು.
ಚೆನ್ನೈ–ಬೆಂಗಳೂರು ಎಕ್ಸ್‌ಪ್ರೆಸ್ ವೇ ಕಾರಿಡಾರ್, ರಾಷ್ಟ್ರೀಯ ಹೆದ್ದಾರಿ–75, ದೇವನಹಳ್ಳಿ–ಹೊಸೂರು ಹೆದ್ದಾರಿಗೆ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ‘ನಗರ ಬೆಳೆಯುತ್ತಿರುವ ವಿಚಾರ, ಅಭಿವೃದ್ಧಿ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ರಿಂಗ್ ರಸ್ತೆ ನಿರ್ಮಾಣ ಮಾಡಬೇಕು. ಕೋಲಾರ ಭಾಗಕ್ಕೆ ಕೈಗಾರಿಕೆಗಳು ಹೆಚ್ಚು ಬರುತ್ತಿವೆ, ಬಿಲ್ಡರ್ಸ್ ಬರುತ್ತಿದ್ದಾರೆ. ಚೆನ್ನೈ-ಬೆಂಗಳೂರು ಕಾರಿಡಾರ್ ಉದ್ಘಾಟನೆಯಾದರೆ ಇನ್ನೂ ಹೆಚ್ಚಿನ ವಾಹನಗಳು ಹಾಗೂ ಜನರು ಬರುತ್ತಾರೆ’ ಎಂದು ಹೇಳಿದರು.
ವೇಮಗಲ್ ಕೈಗಾರಿಕೆ ಪ್ರದೇಶದವರೆಗೆ ರಿಂಗ್ ರಸ್ತೆ ಸಂಪರ್ಕ ಇರಬೇಕು. ಈ ಕಡೆ ವಡಗೂರಿನವರೆಗೆ ವಿಸ್ತರಿಸಬೇಕು. ಮುಂದಿನ ವರ್ಷಗಳಲ್ಲಿ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಆಗುತ್ತದೆ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ರಿಂಗ್ ರಸ್ತೆ ವ್ಯಾಪ್ತಿಯ ರೇಡಿಯಸ್ 60 ಕಿ.ಮೀ ಇರಲಿದೆ. ಇನ್ನೂ ಹೆಚ್ಚು ವಿಸ್ತರಣೆ ಕಷ್ಟ. ಈ ಸಂಬಂಧ ಇನ್ನಷ್ಟು ಚರ್ಚೆ ಆಗಬೇಕಿದೆ’ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತನಾಡಿ, ‘ಮುಂಬರುವ ವರ್ಷಗಳ ಸಂಚಾರ ದಟ್ಟಣೆ ಗಮನದಲ್ಲಿ ಇಟ್ಟುಕೊಂಡೇ ರಿಂಗ್ ರಸ್ತೆ ನಿರ್ಮಾಣ ಮಾಡುತ್ತೇವೆ. ಬೇಗನೇ ಕೆಲಸವಾದರೆ ಕಡಿಮೆ ವೆಚ್ಚ ತಗಲುತ್ತದೆ. ತಡ ಮಾಡಿದರೆ ವೆಚ್ಚ ಹೆಚ್ಚಳವಾಗುತ್ತದೆ’ ಎಂದು ಬೆಂಗಳೂರಿನ ಫೆರಿಫೆರಲ್ ರಸ್ತೆಯ ಉದಾಹರಣೆ ನೀಡಿದರು.
ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಮೂರ್ತಿ, ಕೋಮುಲ್ ನಿರ್ದೇಶಕ ಚಂಜಿಮಲೆ ಜೆ.ರಮೇಶ್, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಉರಟಾಗ್ರಹಾರ ಚೌಡರೆಡ್ಡಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಿವೃತ್ತ ಅಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿ ಇದ್ದರು.
ರಿಂಗ್ ರಸ್ತೆ ನಿರ್ಮಾಣಕ್ಕೆ ಮೌಲ್ಯಮಾಪನ, ಚರ್ಚೆ ಲೋಕೋಪಯೋಗಿ ಅಧಿಕಾರಿಗಳು ಭಾಗಿ ರಿಂಗ್ ರಸ್ತೆ ಒಟ್ಟು ವ್ಯಾಪ್ತಿ 60 ಕಿ.ಮೀ ಸಾಧ್ಯತೆ 2050ಕ್ಕೆ ಸೃಷ್ಟಿ ಆಗಬಹುದಾದ ಸಮಸ್ಯೆಗಳು ಅದನ್ನು ಬಗೆಹರಿಸಲು ಯೋಜನೆ ಸೇರಿದಂತೆ ಮುಂದಿನ 25ರಿಂದ 30 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ರಿಂಗ್ ರಸ್ತ ನಿರ್ಮಾಣ ಮಾಡಬೇಕು ಎಂ.ಮಲ್ಲೇಶ್ ಬಾಬು ಸಂಸದ
ರಿಂಗ್ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನಕ್ಕೆ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ರೈತರ ಜೊತೆ ಸಭೆ ಕೂಡ ನಡೆಸೋಣ. ಬೇರೆ ಬೇರೆ ಆಯ್ಕೆ ಪರಿಶೀಲಿಸೋಣಕೊತ್ತೂರು ಮಂಜುನಾಥ್ ಶಾಸಕ
2050ಕ್ಕೆ ಸೃಷ್ಟಿ ಆಗಬಹುದಾದ ಸಮಸ್ಯೆಗಳು ಅದನ್ನು ಬಗೆಹರಿಸಲು ಯೋಜನೆ ಸೇರಿದಂತೆ ಮುಂದಿನ 25ರಿಂದ 30 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ರಿಂಗ್ ರಸ್ತ ನಿರ್ಮಾಣ ಮಾಡಬೇಕು ಎಂ.ಮಲ್ಲೇಶ್ ಬಾಬು ಸಂಸದ2050ಕ್ಕೆ ಸೃಷ್ಟಿ ಆಗಬಹುದಾದ ಸಮಸ್ಯೆಗಳು ಅದನ್ನು ಬಗೆಹರಿಸಲು ಯೋಜನೆ ಸೇರಿದಂತೆ ಮುಂದಿನ 25ರಿಂದ 30 ವರ್ಷಗಳ ದೃಷ್ಟಿಕೋನ ಇಟ್ಟುಕೊಂಡು ರಿಂಗ್ ರಸ್ತ ನಿರ್ಮಾಣ ಮಾಡಬೇಕು ಎಂ.ಮಲ್ಲೇಶ್ ಬಾಬು ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.