ADVERTISEMENT

ಕೋಲಾರ | ರಥಸಪ್ತಮಿ: 108 ಸೂರ್ಯ ನಮಸ್ಕಾರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 16:05 IST
Last Updated 4 ಫೆಬ್ರುವರಿ 2025, 16:05 IST
ಕೋಲಾರದಲ್ಲಿ ಮಂಗಳವಾರ ರಥಸಪ್ತಮಿ ಪ್ರಯುಕ್ತ ಯೋಗಪಟುಗಳು ಸಾಮೂಹಿಕ 108 ಸೂರ್ಯ ನಮಸ್ಕಾರ ಪ್ರದರ್ಶಿಸಿದರು
ಕೋಲಾರದಲ್ಲಿ ಮಂಗಳವಾರ ರಥಸಪ್ತಮಿ ಪ್ರಯುಕ್ತ ಯೋಗಪಟುಗಳು ಸಾಮೂಹಿಕ 108 ಸೂರ್ಯ ನಮಸ್ಕಾರ ಪ್ರದರ್ಶಿಸಿದರು   

ಕೋಲಾರ: ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ನಗರದ ಸೋಮೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ನಸುಕಿನ 5 ಗಂಟೆಗೆ ರಥಸಪ್ತಮಿ  ಪ್ರಯುಕ್ತ ಸಾಮೂಹಿಕ 108 ಸೂರ್ಯ ನಮಸ್ಕಾರ ಮಾಡಲಾಯಿತು.

‌ಪತಂಜಲಿ ಯೋಗ ಶಿಕ್ಷಣ ಸಮಿತಿಯ ಎಲ್ಲಾ ಶಾಖೆಗಳಿಂದ 500ಕ್ಕೂ ಹೆಚ್ಚು ಯೋಗಬಂಧುಗಳು ಸೂರ್ಯನಿಗೆ 108 ಸೂರ್ಯ ನಮಸ್ಕಾರ ಅರ್ಪಿಸಿದರು. ಆನಂತರ ಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಯೋಗ ನಡಿಗೆ ಮುಖಾಂತರ ಪತಂಜಲಿ ಯೋಗಮಂದಿರವನ್ನು ತಲುಪಿ ಅಲ್ಲಿ ಸೂರ್ಯ ಹೋಮ ಹವನ ನಡೆಸಲಾಯಿತು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸೌಪರ್ಣಿಕ ವಲಯ ಸಂಚಾಲಕರು ಹಾಗೂ ಯೋಗ ಶಿಕ್ಷಕರಾದ ಮಾರ್ಕೋಂಡ ರಥಸಪ್ತಮಿ ಮಹತ್ವ ತಿಳಿಸಿದರು. ಕಾರ್ಯಕ್ರಮವನ್ನು ಸಮಿತಿ ಉಪಾಧ್ಯಕ್ಷ ಜನಾರ್ದನ ನಿರೂಪಿಸಿ, ಚಂದ್ರ ಸ್ವಾಗತಿಸಿ, ಕಾರ್ಯದರ್ಶಿ ವೇಣುಗೋಪಾಲ್ ವಂದಿಸಿದರು.

ADVERTISEMENT

ಸಮಿತಿ ಅಧ್ಯಕ್ಷ ಬಿಸಪ್ಪಗೌಡ, ಗೋವಿಂದರಾಜು, ಯೋಗ ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ರಮೇಶ್, ಮಂಜುಳಾ, ಪತ್ರಕರ್ತ ಚಂದ್ರು, ಆಶಾ, ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.