ಬಂಗಾರಪೇಟೆ: ಬಂಗಾರಪೇಟೆಯಲ್ಲಿ ಬಂಗಾರ ಮತ್ತು ಬೆಳ್ಳಿ ಆಭರಣಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆರೋಪಿಯನ್ನು ಬಂಧಿಸಿರುವ ಪೊಲೀಸರು ಸುಮಾರು ₹ 4.17 ಲಕ್ಷ ಬೆಲೆ ಬಾಳುವ ಆಭರಣ ವಶಕ್ಕೆ ಪಡೆದಿದ್ದಾರೆ.
ಬಂಗಾರಪೇಟೆ ನಿವಾಸಿ ರುಕ್ಕಮ್ಮ ಬಂಧಿತ ಮಹಿಳೆ. ಆಕೆಯಿಂದ 43 ಗ್ರಾಂ ತೂಕದ ಚಿನ್ನ ಮತ್ತು 1 ಕೆ.ಜಿ 454 ಗ್ರಾಂ ಬೆಳ್ಳಿ ಆಭರಣವನ್ನು ವಶಕ್ಕೆ ಪಡೆದಿರುವ ಬಂಗಾರಪೇಟೆ ಠಾಣೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಂಗಾರಪೇಟೆ ವಾಸಿ ಲಕ್ಷ್ಮಿದೇವಮ್ಮ ಎಂಬುವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಮೂರು ದಿನ ತವರು ಮನೆಗೆ ಹೋಗಿದ್ದರು. ಆಗ ಯಾರೋ ನಕಲಿ ಬೀಗವನ್ನು ಉಪಯೋಗಿಸಿ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದರು. ಈ ಸಂಬಂಧ ಲಕ್ಷ್ಮಿದೇವಮ್ಮ ದೂರು ನೀಡಿದ್ದರು. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಏ.28 ರಂದು ಕಳ್ಳತನ ಪ್ರಕರಣ ದಾಖಲಾಗಿತ್ತು. ಕೇವಲ ಮೂರು ದಿನಗಳಲ್ಲಿ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿಯನ್ನು ಪತ್ತೆ ಮಾಡಲು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಹಾಗೂ ಡಿವೈಎಸ್ಪಿ ಎಸ್.ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಆರ್.ದಯಾನಂದ್ ನೇತೃತ್ವದಲ್ಲಿ ಪಿಎಸ್‍ಐ ಪ್ರಕಾಶ್ ನರಸಿಂಗ್ ಮತ್ತು ತಂಡದವರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಎಸ್.ಪಾಂಡುರಂಗ, ಆರ್.ದಯಾನಂದ್ ಮಾರ್ಗದರ್ಶನದಂತೆ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಬಂಗಾರಪೇಟೆ ಪಿಎಸ್‍ಐ ಪ್ರಕಾಶ್ ನರಸಿಂಗ್, ಸಿಬ್ಬಂದಿ ನಾಗೇಶ್, ಚಲಪತಿ, ಮಧುಕುಮಾರ್, ಸುನೀಲ್ ಮತ್ತು ಮುನೇಂದ್ರ ಅವರ ಕೆಲಸವನ್ನು ಎಸ್‌ಪಿ ಶಾಂತರಾಜು ಪ್ರಶಂಶಿಸಿದ್ದಾರೆ.
ಬಂಗಾರಪೇಟೆ ಪೊಲೀಸರ ಕಾರ್ಯಾಚರಣೆ 43 ಗ್ರಾಂ ತೂಕದ ಚಿನ್ನ, 1 ಕೆ.ಜಿ 454 ಗ್ರಾಂ ಬೆಳ್ಳಿ ಆಭರಣ ವಶ ಕಾರ್ಯಾಚರಣೆ ಕೈಗೊಂಡ ಸಿಬ್ಬಂದಿಗೆ ಎಸ್‌ಪಿ ಶಾಂತರಾಜು ಶ್ಲಾಘನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.