ADVERTISEMENT

ಕೋಲಾರ | 1,316 ವಯೋವೃದ್ಧರು, 704 ಅಂಗವಿಕಲರಿಂದ ಮನೆಯಿಂದಲೇ ಮತದಾನ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 15:07 IST
Last Updated 15 ಏಪ್ರಿಲ್ 2024, 15:07 IST

ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದ 85 ವರ್ಷ ದಾಟಿದ ಮತದಾರರಲ್ಲಿ ಶೇ 91.84 ಮಂದಿ ಹಾಗೂ ಅಂಗವಿಕಲ ಮತದಾರರಲ್ಲಿ ಶೇ 92.75 ಮಂದಿ ಮತದಾನ ಮಾಡಿದ್ದಾರೆ. 

ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿಸಿಕೊಂಡಿದ್ದ 85 ವರ್ಷ ಮೇಲಿನ ವೃದ್ಧರು ಹಾಗೂ ಅಂಗವಿಕಲರಿಗೆ ಶನಿವಾರ ಹಾಗೂ ಭಾನುವಾರ ಮನೆಯಿಂದಲೇ ಮತದಾನಕ್ಕೆ ಅವಕಾಶ ಕೊಡಲಾಗಿತ್ತು.

ಜಿಲ್ಲೆಯಲ್ಲಿ 13,815 ಮಂದಿ 85 ವರ್ಷ ದಾಟಿದ ಮತದಾರರಿದ್ದು, ಅವರಲ್ಲಿ 1,433 ಮಂದಿ ಮನೆಯಲ್ಲೇ ಮತದಾನ ಮಾಡುವ ಅವಕಾಶ ಆಯ್ಕೆ ಮಾಡಿಕೊಂಡಿದ್ದರು. 1,316 ಮಂದಿ ಮತ ಚಲಾಯಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಒಟ್ಟು 20,413 ಅಂಗವಿಕಲ ಮತದಾರರಿದ್ದು, 759 ಮಂದಿ ಮನೆಯಲ್ಲೇ ಮತದಾನ ಮಾಡುವ ಆಯ್ಕೆ ಮಾಡಿಕೊಂಡಿದ್ದರು. ಅವರಲ್ಲಿ 704 ಮಂದಿ ಮತದಾನ ಮಾಡಿದ್ದಾರೆ. ಅಂದರೆ ಶೇ 92.75 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.