ADVERTISEMENT

ಕೆಜಿಎಫ್‌ | ಸುಲಿಗೆ ಪ್ರಕರಣ: ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜೂನ್ 2024, 15:26 IST
Last Updated 11 ಜೂನ್ 2024, 15:26 IST
ಕೆಜಿಎಫ್‌ ತಾಲ್ಲೂಕು ಬೇತಮಂಗಲ ಪೊಲೀಸರು ಸುಲಿಗೆ ಪ್ರಕರಣದ ಆರೋಪಿಗಳಿಂದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಕೆಜಿಎಫ್‌ ತಾಲ್ಲೂಕು ಬೇತಮಂಗಲ ಪೊಲೀಸರು ಸುಲಿಗೆ ಪ್ರಕರಣದ ಆರೋಪಿಗಳಿಂದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.   

ಕೆಜಿಎಫ್‌: ದ್ವಿಚಕ್ರ ವಾಹನ ಸವಾರನನ್ನು ಅಡ್ಡಗಟ್ಟಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇತಮಂಗಲ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಮೇ 27ರಂದು ಮುಳಬಾಗಲು ತಾಲ್ಲೂಕಿನ ಟಿ.ಗಂಗಾಪುರದ ನಿವಾಸಿ ರೆಡ್ಡಪ್ಪ ಎಂಬುವರು ವಿ.ಕೋಟೆಯಿಂದ ತಮ್ಮ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು. ತಾಯಲೂರು ಕ್ರಾಸ್ ಬಳಿ ಬೈಕ್ ಸವಾರನನ್ನು ಅಡ್ಡಗಟ್ಟಿದ ಆರೋಪಿಗಳಾದ ಹರೀಶ್‌, ಪವನ್‌ ಕಲ್ಯಾಣ್‌ ಮತ್ತು ಸುಬ್ರಹ್ಮಣಿ ಎಂಬುವರು ಹತ್ತು ಸಾವಿರ ರೂಪಾಯಿ ಮತ್ತು ಮೊಬೈಲ್ ದೋಚಿಕೊಂಡು ಪರಾರಿಯಾಗಿದ್ದರು.

ತನಿಖೆ ನಡೆಸಿದ ವಿಶೇಷ ಪೊಲೀಸ್ ದಳದ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ , ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲಾ ಆರೋಪಿಗಳು ಸಮೀಪದ ತಾತೇನಹಳ್ಳಿ ನಿವಾಸಿಗಳಾಗಿದ್ದಾರೆ.

ADVERTISEMENT

ಪೊಲೀಸ್ ಇನ್‌ಸ್ಪೆಕ್ಟರ್ ಕೆ. ಪ್ರಶಾಂತ್, ಸಬ್‌ ಇನ್‌ಸ್ಪೆಕ್ಟರ್ ಗುರುರಾಜ ಚಿಂತಾಕಲ, ಸಿಬ್ಬಂದಿಗಳಾದ ಗಜೇಂದ್ರ, ಶ್ರೀನಿವಾಸ್‌, ಸತೀಶ್ ಕುಮಾರ್‌, ಸಿದ್ದು ಸುಂಟ್ಯಾನ ಕಾರ್ಯಾಚರಣೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.