ADVERTISEMENT

ಕೆಜಿಎಫ್‌ | ಲಿಫ್ಟ್‌ನಲ್ಲಿ ಅವ್ಯವಸ್ಥೆ: ಸಿಕ್ಕಿಹಾಕಿಕೊಂಡಿದ್ದ ಮಹಿಳೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 14:48 IST
Last Updated 22 ಜುಲೈ 2024, 14:48 IST
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿರುವ ಲಿಫ್ಟ್‌
ಕೆಜಿಎಫ್‌ ತಾಲ್ಲೂಕು ಆಡಳಿತ ಸೌಧದಲ್ಲಿರುವ ಲಿಫ್ಟ್‌   

ಕೆಜಿಎಫ್‌: ತಾಲ್ಲೂಕು ಆಡಳಿತ ಸೌಧದ ಮಹಡಿಯಲ್ಲಿರುವ ಕಚೇರಿಗೆ ಹೋಗಲು ಮಹಿಳೆಯೊಬ್ಬರು ಲಿಫ್ಟ್‌ ಬಳಿಸಿದ್ದು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡ ಘಟನೆ ಸೋಮವಾರ ನಡೆದಿದೆ.

ನೆಲ ಮಾಳಿಗೆಯಲ್ಲಿರುವ ಲಿಫ್ಟ್‌ನಿಂದ ಮೇಲಿನ ಮಹಡಿಯಲ್ಲಿರುವ ಕಚೇರಿಗೆ ಹೋಗಲು ಮಹಿಳೆಯೊಬ್ಬರು ಲಿಫ್ಟ್‌ನಲ್ಲಿ ಹೋಗಲು ಮುಂದಾಗಿದ್ದಾರೆ. ಲಿಫ್ಟ್ ಬಾಗಿಲು ಹಾಕಿಕೊಂಡ ನಂತರ ಮೇಲಕ್ಕೆ ಹೋಗಲೇ ಇಲ್ಲ. ಸುಮಾರು ಹೊತ್ತು ಏಕಾಂಗಿಯಾಗಿ ಕಾಲ ಕಳೆದ ಮಹಿಳೆ ಲಿಫ್ಟ್‌ನಲ್ಲಿದ್ದ ಎಮರ್ಜೆನ್ಸಿ ಫೋನ್‌ನಿಂದ ಕರೆ ಮಾಡಿದರು. ಕಚೇರಿಯಲ್ಲಿ ಅಡ್ಡಾಡುತ್ತಿದ್ದ ಸಾರ್ವಜನಿಕರೊಬ್ಬರು ಫೋನ್‌ ತೆಗೆದುಕೊಂಡಾಗ, ಮಹಿಳೆ ತಾನು ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವುದಾಗಿ ಮಾಹಿತಿ ನೀಡಿದರು.

ತಕ್ಷಣವೇ ಕಚೇರಿಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಲಿಫ್ಟ್‌ ಚಾಲನೆ ಮಾಡಲು ಕ್ರಮ ಕೈಗೊಂಡರು. ಮೇಲಕ್ಕೆ ಹೋದ ಲಿಫ್ಟ್‌ನಲ್ಲಿದ್ದ ಮಹಿಳೆ ಬಾಗಿಲು ತೆಗೆದ ತಕ್ಷಣ ಲಿಫ್ಟ್‌ನಿಂದ ಓಡಿ ಹೋದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ADVERTISEMENT

ವಿದ್ಯುತ್ ಸಮಸ್ಯೆಯಿಂದಾಗಿ ಸ್ವಲ್ಪ ಸಮಯ ಲಿಫ್ಟ್‌ನಲ್ಲಿ ಅವ್ಯವಸ್ಥೆ ಆಗಿತ್ತು. ಕಚೇರಿಯ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡು ಲಿಫ್ಟ್‌ ಚಾಲನೆಗೆ ಕ್ರಮ ಕೈಗೊಂಡಿದ್ದಾರೆಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.