ADVERTISEMENT

ಶ್ರೀನಿವಾಸಪುರ: ಸಾಲದ ಮೇಳ, ಡಿಜಿಟಲ್ ಶಿಬಿರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 6:54 IST
Last Updated 7 ಫೆಬ್ರುವರಿ 2026, 6:54 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಾರ್ಯಾಲಯದಲ್ಲಿ ಪುರಸಭೆಯಿಂದ ಸಾಲ ಮೇಳ ಮತ್ತು ಡಿಜಿಟಲ್ ಶಿಬಿರ ಕಾರ್ಯಕ್ರಮ ನಡೆಯಿತು.

ಚಾಲನೆ ನೀಡಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ‘ಈ ತರಬೇತಿ ಕಾರ್ಯಾಗಾರವು ಉದ್ಯೋಗ ಹುಡುಕುವವರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಡಿಜಿಟಲ್ ಆಗಿ ನಿರ್ವಹಿಸಲು ನೆರವು ನೀಡುತ್ತದೆ’ ಎಂದರು,

ADVERTISEMENT

ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಭರತ್ , ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಕಾಸ್ ಜೈನ್ ಮಾತನಾಡಿ, ಹಕ್ಕು ಪಡೆಯದ ರೇವಣಿ ಖಾತೆಯಲ್ಲಿರುವ ಹಣ ಮರಳಿ ಪಡೆಯಲು ಈ ವಿಧಾನ ಅನುಸರಿಸಿ ಅಗತ್ಯವಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.

ಆರ್ಥಿಕ ಸಂಪನ್ಮೂಲ ವ್ಯಕ್ತಿ ವೆಂಕಟೇಶ್ ಮಾತನಾಡಿ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಸುರಕ್ಷಾ ಭೀಮಾ ಯೋಜನೆ, ಜನ್-ದನ್ ಯೋಜನೆ ಹಾಗೂ ಆರ್ಥಿಕ ಸಾಕ್ಷರತೆಯ ಬಗ್ಗೆ ತಿಳಿಸಿದರು.

ಪುರಸಭೆ ಸಿಬ್ಬಂದಿ ಎಫ್‍ಡಿಎ ಗಳಾದ ಮಂಜುನಾಥ್, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.