
ಪ್ರಜಾವಾಣಿ ವಾರ್ತೆ
ಕೋಲಾರ: ಪುಣೆಯಲ್ಲಿ ಜ.28 ಹಾಗೂ 29ರಂದು ನಡೆದ ಅಖಿಲ ಭಾರತ ಮಾಸ್ಟರ್ಸ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜಿಲ್ಲೆ ಆಟಗಾರ ಎಂ.ನಾಗರಾಜ್ ಮಿಂಚಿದ್ದಾರೆ.
ಅವರು ಪ್ರತಿನಿಧಿಸಿದ್ದ ಕರ್ನಾಟಕ ತಂಡವು ಒಂದು ವಿಭಾಗದಲ್ಲಿ ಚಿನ್ನ, ಎರಡು ವಿಭಾಗಳಲ್ಲಿ ಬೆಳ್ಳಿ ಪದಕ ಜಯಿಸಿದೆ.
60 ವರ್ಷ ಮೇಲಿನವರ ವಿಭಾಗದ (5x5) ಪಂದ್ಯದಲ್ಲಿ ಬೆಳ್ಳಿ ಪದಕ ಲಭಿಸಿದೆ. ಇದೇ ವಿಭಾಗದ 3x3 ಮಾದರಿ ಪಂದ್ಯದಲ್ಲಿ ಚಿನ್ನಕ್ಕೆ ಭಾಜನವಾಗಿದೆ. 65 ವರ್ಷ ಮೇಲಿನವರ ವಿಭಾಗದಲ್ಲಿ ರನ್ನರ್ ಅಪ್ ಆಗಿ ಬೆಳ್ಳಿ ಗೆದ್ದಿದೆ. ನಾಗರಾಜ್ ಅವರು ಎಡಿಸಿ ಚಾಲಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.