
ವೇಮಗಲ್: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಮಂಗಳವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಖರೀದಿ ಭರಾಟೆ ಜೋರಾಗಿತ್ತು.
ಶಿವರಾತ್ರಿ ಹಬ್ಬ ಆಚರಿಸುವವರು ಸಾಮಾನ್ಯವಾಗಿ ಹಬ್ಬದ ದಿನ ಉಪವಾಸವಿರುತ್ತಾರೆ. ಮರುದಿನ ಹಬ್ಬದೂಟ ಮಾಡುವುದು ವಾಡಿಕೆ. ಹೀಗಾಗಿ, ಉಪವಾಸವುಳ್ಳವರು ಫಲಹಾರ ಸೇವಿಸುವುದರಿಂದ ಹಣ್ಣುಗಳಿಗೆ ಬೇಡಿಕೆ ಹೆಚ್ಚಿತ್ತು.
ಶಿವನ ಆರಾಧನೆಗಾಗಿ ಹೂವು, ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಕಲ್ಲಂಗಡಿ, ಕರಬೂಜ, ಸೇಬು, ಮೊಸಂಬಿ, ದ್ರಾಕ್ಷಿ, ದಾಳಿಂಬೆ, ಸಪೋಟ, ಬಾಳೆ ಮತ್ತಿತರ ಹಣ್ಣುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದದ್ದು ಕಂಡುಬಂತು. ಸೇವಂತಿಗೆ, ದುಂಡುಮಲ್ಲಿಗೆ, ಕಾಕಡ, ಕನಕಾಂಬರ ಸೇರಿದಂತೆ ಹೂವಿಗೆ ಬೇಡಿಕೆಯೂ ಹೆಚ್ಚಿದ್ದು, ದರವೂ ಸ್ವಲ್ಪ ಹೆಚ್ಚಾಗಿತ್ತು.
ಶಿವರಾತ್ರಿ ಹಬ್ಬದ ಖರೀದಿ ಹೆಚ್ಚಾಗಿದ್ದು, ಕಬ್ಬು ₹60, ಅವರೆಕಾಯಿ ಕೆಜಿ ₹80, ಚೆಂಡು ಕೆಜಿಗೆ ₹40, ಗೆಣಸು ಕೆಜಿಗೆ ₹50, ಕಡ್ಲೆಕಾಯಿ ₹120-150ಗೆ ಮಾರಾಟವಾಗುತ್ತಿತ್ತು.
ಶಿವರಾತ್ರಿ ಅಂಗವಾಗಿ ಪಟ್ಟಣದ ಶಂಭುಲಿಂಗೇಶ್ವರ ದೇವಸ್ಥಾನ, ಸೋಮೇಶ್ವರ, ವೀರಭದ್ರ, ಬೀರೇಶ್ವರ ಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಸೇವೆಗಳಿಗೆ ಭಾರೀ ಸಿದ್ಧತೆಗಳು ಕಂಡುಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.