ADVERTISEMENT

ಸ್ವಚ್ಛ ಭಾರತ ಕನಸು ನನಸಾಗಿಸಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:48 IST
Last Updated 8 ಅಕ್ಟೋಬರ್ 2019, 13:48 IST
ಕೋಲಾರದ ಶಾರದಾಚಿತ್ರಮಂದಿರ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಸದ ರಾಶಿಯನ್ನು ಸಂಸದ ಎಸ್.ಮುನಿಸ್ವಾಮಿ ತೆರವುಗೊಳಿಸಿದರು.
ಕೋಲಾರದ ಶಾರದಾಚಿತ್ರಮಂದಿರ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಕಸದ ರಾಶಿಯನ್ನು ಸಂಸದ ಎಸ್.ಮುನಿಸ್ವಾಮಿ ತೆರವುಗೊಳಿಸಿದರು.   

ಕೋಲಾರ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕನಸನ್ನು ನನಸಲು ಮಾಡಲು ಸಾರ್ವಜನಿಕರು ಸಂಕಲ್ಪ ಮಾಡಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿಮನವಿ ಮಾಡಿದರು.

ನಗರದ ಬ್ರಾಹ್ಮಣರ ಬೀದಿ, ಶಾರದಾಚಿತ್ರಮಂದಿರ ರಸ್ತೆ, ಬಸ್‌ನಿಲ್ದಾಣದ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ‘ಸ್ಥಳೀಯ ಸಂಸ್ಥೆಗಳು ಕಸ ವಿಂಗಣೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರೆ ಕವಿ ವಿಲೇವಾರಿ ಕೆಲಸವೂ ಸುಭವಾಗಿ ಅಗುತ್ತದೆ’ ಎಂದರು.

‘ಸ್ವಚ್ಛತೆಗೆ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು. ಕೇವಲ ಘೋಷಣೆಯಾಗಿ ಉಳಿಯಬಾರದು. ಕನಿಷ್ಟ ವಾರಕ್ಕೊಮ್ಮೆ ಶ್ರಮದಾನಕ್ಕೆ ಯುವಕರು ಮುಂದಾಗಬೇಕು, ನಮ್ಮ ಮನೆ, ಬೀದಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಕ ಆರೋಗ್ಯ ಸಮಾಜ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಮೋದಿ ಅವರು ದೂರದೃಷ್ಟಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ಧಾರೆ. ಅವರಿಗೆ ದೇಶ ಮುಖ್ಯವೇ ಹೊರತು ಯಾವುದೇ ಭ್ರಷ್ಟತೆಗೆ ಒಳಗಾಗುವವರಲ್ಲ. ದೇಶದಲ್ಲಿ ಕಸ ಸ್ವಚ್ಛತೆಯ ಜತೆಗೆ ಭ್ರಷ್ಟತೆಯನ್ನು ಸ್ವಚ್ಚಗೊಳಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಬೇರೆಯವರು ಸರ್ಕಾರದ ಹಣ, ಜನರಿಗೆ ಸೇರಬೇಕಾದ ಯೋಜನೆಗಳ ಹಣ ತಿನ್ನಲು ಬಿಡುವುದಿಲ್ಲ. ಮಾತು ಇಡೀ ದೇಶಕ್ಕೆ ಆದರ್ಶವಾಗಿದೆ’ ಎಂದು ಹೇಳಿದರು.

‘ದೇಶವನ್ನು ವಿಶ್ವಗುರುವಾಗಿಸಲು ಶ್ರಮಿಸುತ್ತಿರುವ ಮೋದಿಯವರ ಪರಿಶ್ರಮದಿಂದಾಗಿ ಇಂದು ವಿಶ್ವದಲ್ಲೇ ಭಾರತದ ಘನತೆ ಹೆಚ್ಚಿದೆ. ಅಮೇರಿಕಾವೇ ಭಾರತಕ್ಕೆ ಗೌರವ ನೀಡುತ್ತಿದ್ದು ಇದರಿಂದ ದೇಶದ ಗೌರವ ಹೆಚ್ಚೆತ್ತುದೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಯುವಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಎಸ್ಸಿಮೋರ್ಚಾದ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ತಿಮ್ಮರಾಯಪ್ಪ, ಶ್ರೀನಾಥ್, ಸಂಪತ್, ಮನೋಹರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.