ಮಾಲೂರು: ಮಾಲೂರು ನಗರಸಭೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಶಾಸಕ ಕೆವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಘೋಷಣೆ ಮಾಡಿದ್ದು, ಪುರಸಭೆ ಕಚೇರಿ ಮುಂಭಾಗದಲ್ಲಿ ನಗರಸಭೆ ನಾಮಫಲಕ ಹಾಕುವ ಹಾಗೂ ಪುರಸಭೆ ಮಾಜಿ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಲ್ಲಿನ ಪುರಸಭೆ 1935ರಲ್ಲಿ ಆರಂಭವಾಗಿದ್ದು, ಇಲ್ಲಿಯವರೆಗೆ ಸುಮಾರು 42 ಮಂದಿ ಪುರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಸಹಕಾರದಿಂದ ಮಾಲೂರು ಪುರಸಭೆಯನ್ನು ನಗರಸಭೆಯನ್ನಾಗಿ ಸರ್ಕಾರ ಘೋಷಣೆ ಮಾಡಲು ಅನುಕೂಲವಾಯಿತು ಎಂದು ತಿಳಿಸಿದರು.
ಮಾಲೂರು ನಗರವನ್ನು ವೈಜ್ಞಾನಿಕವಾಗಿ ಉತ್ತಮ ನಗರವನ್ನಾಗಿ ಮಾಡಲು ಡಿಪಿಆರ್ ಮಾಡಿಸಲಾಗುವುದು. ಈಗಾಗಲೇ ಕುಡಿಯುವ ನೀರು ಸರಬರಾಜು ಮಾಡಲು ಡಿಪಿಆರ್ ಮಾಡಿಸಲಾಗಿದೆ. ಇದರಂದ ಪೈಪ್‌ಲೈನ್ ಮೂಲಕ ಪ್ರತಿ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಅದೇ ರೀತಿ ಯುಜಿಡಿ ನಿರ್ಮಾಣ ಮಾಡಲು ಡಿಪಿಆರ್ ಸಿದ್ಧಗೊಳಿಸಲು ಸೂಚಿಸಲಾಗಿದೆ. ಪಟ್ಟಣದಲ್ಲಿ ಎಲ್ಲಾ ವಾರ್ಡ್‌ಗಳ 24 ಕಿ.ಮೀ. ರಸ್ತೆ ಅಭಿವೃದ್ಧಿಗೊಳಿಸಲು ತಿರ್ಮಾನಿಸಲಾಗಿದೆ.
ಪುರಸಭೆಯ ಮಾಜಿ ಅಧ್ಯಕ್ಷರಾದ ಎಂವಿ.ವೇಮನ, ಸಿ.ಪಿ.ನಾಗರಾಜ್, ರಾಮಮೂರ್ತಿ, ವಿಜಯಲಕ್ಷ್ಮಿ ಚಂದ್ರಾರೆಡ್ಡಿ, ಎಂ.ವಿ.ರೂಪ, ಕೃಷ್ಣಪ್ಪ, ವಿಜಯಲಕ್ಷ್ಮಿ, ಪ್ರದೀಪ್ ಕುಮಾರ್, ವಿಜಯಲಕ್ಷ್ಮಿ ಕೃಷ್ಣಪ್ಪ, ರಾಜಪ್ಪ, ಮುರಳಿಧರ್, ಇಮ್ತಿಯಾಜ್, ಕೋಮಲ, ಪದ್ಮಾವತಿ, ವೆಂಕಟೇಶ್, ಭವ್ಯ ಶಂಕರ್, ರಾಮಮೂರ್ತಿ, ಭಾರತಮ್ಮ ಶಂಕರಪ್ಪ, ಬಾಬು ರೆಡ್ಡಿ, ಅಮುದಾ ವೇಣು, ಎಂ.ಆರ್.ರಂಗಪ್ಪ, ರಘು, ಸುರೇಶ್, ದಿನೇಶ್ ಗೌಡ, ಜಾಕಿ, ತಬ್ರೇಶ್, ಕವಿತ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.