ADVERTISEMENT

ಮುಂಗಾರು: ರೈತರಲ್ಲಿ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:17 IST
Last Updated 6 ಜೂನ್ 2020, 9:17 IST
ಮುಳಬಾಗಿಲು ತಾಲ್ಲೂಕು ಸಿದ್ಧಘಟ್ಟ ಗ್ರಾಮದಲ್ಲಿ ಬಿತ್ತನೆ ಮಾಡಲು ರೈತರು ಜಮೀನು ಹದಗೊಳಿಸುತ್ತಿರುವುದು
ಮುಳಬಾಗಿಲು ತಾಲ್ಲೂಕು ಸಿದ್ಧಘಟ್ಟ ಗ್ರಾಮದಲ್ಲಿ ಬಿತ್ತನೆ ಮಾಡಲು ರೈತರು ಜಮೀನು ಹದಗೊಳಿಸುತ್ತಿರುವುದು   

ಮುಳಬಾಗಿಲು: ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿದೆ. ಕಳೆದ ವಾರದಿಂದ ಬಿದ್ದ ಮಳೆಗೆ ರೈತರು ಹೊಲಗದ್ದೆಗಳನ್ನು ಹದಗೊಳಿಸಿದ್ದಾರೆ. ಈ ಭಾಗದಲ್ಲಿ ರಾಗಿ, ಭತ್ತ ಪ್ರಮುಖ ಬೆಳೆಯಾಗಿದೆ.

ರೈತರು ತಮ್ಮ ಆರ್ಥಿಕ ಚಟುವಟಿಕೆಯ ಭಾಗವಾಗಿ ಟೊಮೆಟೊ, ಅಲೂಗಡ್ಡೆ, ಕೊತ್ತಂಬರಿಸೊಪ್ಪು, ದಂಟುಸೊಪ್ಪನ್ನು ಬೆಳೆಯನ್ನು ಬೆಳೆಯುತ್ತಾರೆ. ಒಂದು ಫಸಲು ನಷ್ಟ ತಂದುಕೊಟ್ಟರು ಮತ್ತೊಂದು ಫಸಲು ಲಾಭ ತರುವುದೆಂಬುದು ತಾಲ್ಲೂಕಿನ ರೈತರ ಆಶಾಭಾವನೆ.

ಧರಣಿ ಮಳೆ ಬಿದ್ದರೆ ಬೆಳೆ ಬೆಳೆಯುವುದು ಕಾಯಂ ಎಂಬುದು ನಂಬಿಕೆ. ಕೆಲವು ಕಡೆಗಳಲ್ಲಿ ಬಿತ್ತನೆ ಕಾರ್ಯ ಸಾಗಿದೆ. ಹಿಂದಿನಂತೆ ಈ ಬಾರಿ ಬಿತ್ತನೆ ಬೀಜದ ಕೊರತೆ ರೈತರನ್ನು ಕಾಡಿಲ್ಲ. ರೈತರು ಕೇಳಿದಷ್ಟು ನೆಲಗಡಲೆ, ರಾಗಿ, ಅವರೆ, ಅಲಸಂದಿ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆ ನೀಡಲು ಸಿದ್ಧವಿದೆ ಎಂದು ಕೃಷಿ ಇಲಾಖೆ ಸಹಾಯಕನಿರ್ದೇಶಕ ಅಮರನಾಥರೆಡ್ಡಿ ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ರಾಗಿ 13,930 ಹೆಕ್ಟೇರ್, ನೆಲಗಡಲೆ 8 ಸಾವಿರ ಹೆಕ್ಟೇರ್ ಹಾಗೂ ತೋಟಗಾರಿಕೆ ಬೆಳೆಯಾದ ಅಲೂಗಡ್ಡೆಯನ್ನು ತಾಲ್ಲೂಕಿನ ಕಸಬಾ ಬೈರಕೂರು ಹೋಬಳಿಗಳಲ್ಲಿ ಹಾಗೂ ಟೊಮೆಟೊ ತಾಲ್ಲೂಕಿನ ಐದು ಹೋಬಳಿಗಳಲ್ಲೂ 10 ಸಾವಿರ
ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.