
ಬೇತಮಂಗಲ: ಸುಮಾರು 12 ದಿನಗಳಿಂದ ನಡೆಯುತ್ತಿದ್ದ ಮೇಲುಪಲ್ಲಿ ಗಂಗಮಾಂಭ ದೇವಿ ಜಾತ್ರಾ ಮಹೋತ್ಸವದ ಸಂಪನ್ನವಾಗಿ ತೆರೆ ಕಂಡಿತು.
ಜಾತ್ರೆ ಅಂಗವಾಗಿ ಸೋಮವಾರ ರಾತ್ರಿ ಕರಗ ಮಹೋತ್ಸವ ಹಾಗೂ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಕರಗ ಅಂಗವಾಗಿ ಸೋಮವಾರ ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿವಿಧ ಪೂಜೆ, ಅಭಿಷೇಕ, ಮಹಾಮಂಗಳಾರತಿ, ಅನ್ನದಾನ ಹಾಗೂ ಇತರೆ ಕಾರ್ಯಕ್ರಮಗಳು ನಡೆದವು.
ದೇವಾಲಯವನ್ನು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲಿನ ಸಾವಿರಾರು ಮಂದಿ ಭಕ್ತರು ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ಸೋಮವಾರ ಮಧ್ಯಾಹ್ನ ಆರಂಭವಾದ ಉತ್ಸವ ಮೂರ್ತಿಗಳ ಮೆರವಣಿಗೆ ಹಾಗೂ ಕರಗ ಹೊತ್ತ ಪೂಜಾರಿ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಿ ಪೂಜೆ ಸ್ವೀಕರಿಸಿದರು. ನಂತರ ರಾತ್ರಿ 11 ಗಂಟೆಗೆ ಕರಗ ಹೊತ್ತ ಪೂಜಾರಿ ಅಗ್ನಿಗುಂಡ ಪ್ರವೇಶಿಸಿದರು. ಸಾವಿರಾರು ಭಕ್ತರು ಅಗ್ನಿಕೊಂಡ ಪ್ರವೇಶಿಸಿ ಹರಕೆ ತೀರಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪುಷ್ಪ ಜಯಪ್ರಕಾಶ್ ನಾಯ್ಡು, ರಾಜೇಂದ್ರ, ಗಜೇಂದ್ರ ರೆಡ್ಡಿ, ಎಸ್.ವಿ.ಜಿ.ಸುಬ್ರಮಣಿ, ರವಿಚಂದ್ರನ್, ಶಬರೀಶ್, ವಿನಯ್ ಕುಮಾರ್, ಆನಂದ ಗೌಡ, ಸ್ಕೂಲ್ ವೆಂಕಟೇಶಪ್ಪ, ಮಹೇಂದ್ರ, ಅರುಣ್ ರೆಡ್ಡಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.