
ಮುಳಬಾಗಿಲು: ತಾಲ್ಲೂಕಿನಲ್ಲಿ ಇತ್ತೀಚೆಗೆ ಬಿದ್ದ ಭಾರಿ ಮಳೆಯಿಂದಾಗಿ ಎಲ್ಲಿ ನೋಡಿದರೂ ಭತ್ತ ಹಾಗೂ ರಾಗಿ ಪೈರುಗಳು ಕಂಗೊಳಿಸುತ್ತಿವೆ.
ತಾಲ್ಲೂಕಿನಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಬಹುತೇಕ ಎಲ್ಲಾ ಕೆರೆಗಳು ತುಂಬಿ ಕೋಡಿ ಹರಿದರೆ, ಕಾಲುವೆ, ಕುಂಟೆ ಹಾಗೂ ಏಟಿಗಳು ಮೈದುಂಬಿ ಹರಿಯುತ್ತಿದೆ. ಇದರಿಂದ ತಾಲ್ಲೂಕಿನಲ್ಲಿ ಎಲ್ಲಾ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ.
ನಾಲ್ಕು ವರ್ಷಗಳ ಹಿಂದೆ ಕೆರೆಗಳು ತುಂಬಿದರೂ ಅಂತರ್ಜಲ ಹೆಚ್ಚಾಗಲು ಕೆರೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಿಟ್ಟಿರಲಿಲ್ಲ. ಆದರೆ, ಈ ಬಾರಿಯ ಮಳೆಯಿಂದಾಗಿ ಎಲ್ಲಾ ಕೆರೆ, ಕುಂಟೆ ತುಂಬಿವೆ. ಕೆರೆಯ ತೂಬು ತೆಗೆಯದಿದ್ದರೂ ಬಾವಿ, ಕುಂಟೆ, ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಿ ನೀರಿನ ಕೊರತೆ ನಿವಾರಣೆಯಾಗಿದೆ.
ಮಳೆ ಅಭಾವದಿಂದ ಜನತೆ ಕೇವಲ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಭೂಮಿ ತೇವಾಂಶದಿಂದ ಕೂಡಿದ್ದು, ಮತ್ತೆ ಹಳೆಯ ಬೆಳೆಗಳತ್ತ ಜನತೆ ಮುಖಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.