ADVERTISEMENT

ಮುಳಬಾಗಿಲು: ನಾಡ ಕಚೇರಿ ಮೇಲೆ ಬೆಳೆದ ಗಿಡಗಂಟಿಗಳು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 3:54 IST
Last Updated 28 ಡಿಸೆಂಬರ್ 2025, 3:54 IST
ಮುಳಬಾಗಿಲು ನಗರದ ತಾಲ್ಲೂಕು ಕಚೇರಿ ಬಳಿಯ ನಾಡಕಚೇರಿ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿರುವುದು
ಮುಳಬಾಗಿಲು ನಗರದ ತಾಲ್ಲೂಕು ಕಚೇರಿ ಬಳಿಯ ನಾಡಕಚೇರಿ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿರುವುದು   

ಮುಳಬಾಗಿಲು: ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿರುವ ಕಸಬಾ ನಾಡ ಕಚೇರಿ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿವೆ. ಇದರಿಂದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟುಕೊಂಡಿದ್ದು, ಗೋಡೆಯು ಬೀಳುವ ಹಂತಕ್ಕೆ ತಲುಪಿದೆ. ಆದರೆ, ಅಧಿಕಾರಿಗಳು ಮಾತ್ರ ಗೋಡೆ ದುರಸ್ತಿಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ. 

ಮುಳಬಾಗಿಲು ನಗರದ ಹೃದಯ ಭಾಗದಲ್ಲಿರುವ ತಾಲ್ಲೂಕು ಸೌಧ ಅಥವಾ ತಾಲ್ಲೂಕು ಕಚೇರಿ, ಚುನಾವಣಾ ಕಚೇರಿ, ತಾಲ್ಲೂಕು ಖಜಾನೆ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಗಳಿಗೆ ಹೊಂದಿಕೊಂಡ ನಾಡಕಚೇರಿಯನ್ನು ಸರಿಯಾಗಿ ನಿರ್ವಹಿಸದ ಕಾರಣ ಕಟ್ಟಡವು ಅವಸಾನದತ್ತ ತಲುಪಿದೆ. ನಾಡಕಚೇರಿ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿದ್ದು, ಅರಳಿಗಿಡವು ದೊಡ್ಡ ಮರದ ರೀತಿ ಬೆಳೆದಿದೆ. ಇದರಿಂದ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಆತಂಕ ಸೃಷ್ಟಿಯಾಗಿದೆ. 

ಮಳೆ ಬಂದರೆ ಮೇಲ್ಚಾವಣಿಯು ಸೋರುತ್ತದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಕಟ್ಟಡದ ಮೇಲಿನ ಗಿಡಗಳನ್ನು ತೆರವುಗೊಳಿಸಿ, ದುರಸ್ತಿಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.

ADVERTISEMENT

ಈ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಕಟ್ಟಡದ ಮೇಲೆ ಗಿಡಗಳು ಬೆಳೆದಿದ್ದರಿಂದ ಗೋಡೆಗಳು ಬಿರುಕು ಬಿಟ್ಟಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.