ADVERTISEMENT

ಚೀನಾ ಧ್ವಜಕ್ಕೆ ಬೆಂಕಿ; ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 3:05 IST
Last Updated 18 ಜೂನ್ 2020, 3:05 IST
ಕೋಲಾರದ ಬಸ್ ನಿಲ್ದಾಣದಲ್ಲಿ ಬಜರಂಗದಳ ಕಾರ್ಯಕರ್ತರು ಚೀನಾ ವಿರುದ್ಧ ಹೋರಾಟದಲ್ಲಿ ವೀರಮರಣವಪ್ಪಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು
ಕೋಲಾರದ ಬಸ್ ನಿಲ್ದಾಣದಲ್ಲಿ ಬಜರಂಗದಳ ಕಾರ್ಯಕರ್ತರು ಚೀನಾ ವಿರುದ್ಧ ಹೋರಾಟದಲ್ಲಿ ವೀರಮರಣವಪ್ಪಿದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದರು   

ಕೋಲಾರ: ಗಡಿಯಲ್ಲಿ ಕಾಲು ಕೆರೆದು ಜಗಳ ತೆಗೆಯುತ್ತಿರುವ ಚೀನಾ ವರ್ತನೆ ಖಂಡಿಸಿ ಬಜರಂಗದಳ ಕಾರ್ಯಕರ್ತರು ಚೀನಾ ಧ್ವಜಕ್ಕೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಬಸ್‌ ನಿಲ್ದಾಣ ವೃತ್ತದಲ್ಲಿ ಚೀನಾ ದಾಳಿಯಿಂದ ವೀರಮರಣ ಅಪ್ಪಿದ ಯೋಧರ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಮುಖಂಡರು, ‘ಭಾರತ ಶಾಂತಿ ಬಯಸುತ್ತದೆ. ಆದರೆ ತನ್ನ ಸಾರ್ವಭೌಮತೆಗೆ ಧಕ್ಕೆ ಬಂದರೆ ಸಹಿಸಿಕೊಂಡು ಸುಮ್ಮನಿರಲ್ಲ ಎಂಬುದನ್ನು ನಮ್ಮ ಯೋಧರು ಚೀನಾ ಸೈನಿಕರಿಗೆ ತೋರಿಸಿಕೊಟ್ಟಿದ್ದಾರೆ’ ಎಂದರು.

ಚೀನಾದ ಉತ್ಪನ್ನಗಳನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ, ಚೀನಾ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಬಾಬು, ವಿಜಯಕುಮಾರ್, ಡಿ.ಆರ್.ನಾಗರಾಜ್, ಅಪ್ಪಿ, ಸಾಯಿಕುಮಾರ್, ಸಾಯಿಸುಮನ್, ಸಾಯಿಮೌಳಿ, ಎಬಿವಿಪಿ ಹರೀಶ್, ವಿನಯ್, ಭವಾನಿ, ಪ್ರವೀಣ್, ಆನಂದ್, ಸುಧಾಕರ್, ಕುಮಿ, ದಮ್ಮಿ,ದೇವರಾಜ್, ಸುನಿ, ರಾಜೇಶ್, ಅಭಿ, ಮನು, ಅಮ್ಸ್, ಸಂದೇಶ್, ಮಂಜು, ಯಶವಂತ್, ಮಾದೇಶ್, ಶ್ರೀಧರ್, ನಂದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.