ನಂಗಲಿ: ಬುಧವಾರ ರಾತ್ರಿ ಸುರಿದ ಗಾಳಿ ಮತ್ತು ಆಲಿಕಲ್ಲು ಮಳೆಗೆ ನೂರಾರು ಎಕರೆಗಳಷ್ಟು ಟೊಮೆಟೊ, ನೆಲಗಡಲೆ ಹಾಗೂ ಬೀನ್ಸ್ ತೋಟಗಳು ನಾಶವಾಗಿವೆ.
ಬುಧವಾರ ಸಂಜೆಯಿಂದಲೇ ಆರಂಭವಾದ ಮಳೆ ತಡರಾತ್ರಿವರೆಗೂ ಸುರಿಯುತು. ಭಾರೀ ಗಾಳಿ ಹಾಗೂ ದೊಡ್ಡ ಗಾತ್ರದ ಆಲಿಕಲ್ಲು ಸಮೇತ ಮಳೆ ಬಿದ್ದಿದ್ದರಿಂದ ಇಲ್ಲಿನ ಸುನುಪಕುಂಟೆ, ಎಂ.ಚಮಕಲಹಳ್ಳಿ, ಕರಡಿಗಾನಹಳ್ಳಿ, ಪೆದ್ದೂರು, ಪುಣ್ಯಹಳ್ಳಿ, ಕೋಡಿಹಳ್ಳಿ, ಕಾಡೇನಹಳ್ಳಿ ಮುಂತಾದ ಗ್ರಾಮಗಳ ರೈತರು ಬೆಳೆದಿದ್ದ ವಿವಿಧ ಬೆಳೆಗಳು ಸಂಪೂರ್ಣ ನಾಶವಾಗಿದೆ.
ದಪ್ಪ ಆಲಿಕಲ್ಲುಗಳು ಬಿದ್ದು, ಗಾಳಿಯೂ ರಭಸವಾಗಿ ಬೀಸಿದ ಪರಿಣಾಮ ನೆಲಗಡಲೆಯ ಎಲೆಗಳು ಉದುರಿವೆ.
ತಹಶಿಲ್ದಾರ್ ಕೆ.ಎನ್.ರಾಜಶೇಖರ್, ತೋಟಗಾರಿಕೆ ಇಲಾಖೆ ನಿರ್ದೇಶಕಿ ಶಿವಕುಮಾರಿ, ಕಂದಾಯ ನಿರೀಕ್ಷಕ ಉಮೇಶ್, ಗ್ರಾಮ ಲೆಕ್ಕಾಧಿಕಾರಿ ನರೇಶ್ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.