ADVERTISEMENT

ಮಳೆ: ತೋಟಗಾರಿಕೆ ಬೆಳೆಗಳಿಗೆ ಕಂಟಕ

​ಪ್ರಜಾವಾಣಿ ವಾರ್ತೆ
Published 18 ಮೇ 2022, 13:06 IST
Last Updated 18 ಮೇ 2022, 13:06 IST

ಕೋಲಾರ: ಜಿಲ್ಲೆಯಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು, ತೋಟಗಾರಿಕೆ ಬೆಳೆಗಳಿಗೆ ಕಂಟಕ ಎದುರಾಗಿದೆ. ಗಾಳಿಸಹಿತ ಮಳೆಗೆ ಮಾವು ನೆಲಕಚ್ಚಿದ್ದು, ಸುಮಾರು ₹ 9.53 ಕೋಟಿ ಮಾವು ಬೆಳೆ ನಷ್ಟವಾಗಿದೆ.

ಮಾವು ಕೊಯ್ಲು ಆರಂಭವಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆರಾಯ ಕಣ್ಣೀರು ತರಿಸಿದ್ದಾನೆ. ಗಾಳಿಯ ತೀವ್ರತೆಗೆ ಮಾವಿನ ಕಾಯಿಗಳು ಗಿಡದಿಂದ ಉದುರಿವೆ. ಹಲವೆಡೆ ಮರಗಳೇ ಉರುಳಿ ಬಿದ್ದಿವೆ. ಮಳೆಯ ಕಾರಣಕ್ಕೆ ವಾತಾವರಣದಲ್ಲಿ ತೇವಾಂಶ ಹೆಚ್ಚಳಗೊಂಡು ತೋಟಗಾರಿಕೆ ಬೆಳೆಗಳು ಮತ್ತು ಹಣ್ಣಿನ ಬೆಳೆಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಹೂವು ಕಟಾವಿಗೆ ಸಮಸ್ಯೆಯಾಗಿದ್ದು, ಹೂವುಗಳು ಜಮೀನಿನಲ್ಲೇ ಕೊಳೆಯಲಾರಂಭಿಸಿವೆ.

ತುಂತುರು ಮಳೆ, ಹೆಚ್ಚು ಆರ್ದ್ರತೆಯುಳ್ಳ ಹವಾಗುಣ ಮತ್ತು ಮೋಡ ಕವಿದ ವಾತಾವರಣದಿಂದ ಟೊಮೆಟೊ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದೆ. ಬಂಗಾರಪೇಟೆ, ಕೆಜಿಎಫ್‌ ಮತ್ತು ಮುಳಬಾಗಿಲು ತಾಲ್ಲೂಕಿನಲ್ಲಿ ಹಲವು ಕೆರೆಗಳು ತುಂಬಿ ಕೋಡಿ ಹರಿದಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.