ಕೋಲಾರ: ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ–1960ರಡಿ ನೋಂದಣಿಯಾದ ಸಂಘ, ಸಂಸ್ಥೆಗಳ ನೋಂದಣಿ ನವೀಕರಣ ಮಾಡಿಸಬೇಕು ಎಂದು ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲಂ 13ರಂತೆ ನಿರಂತರ 5 ವರ್ಷ ಅಥವಾ ಮೇಲ್ಪಟ್ಟು ನವೀಕರಿಸಲು ವಿಫಲವಾದ ಸಂಘ, ಸಂಸ್ಥೆಯ ನೋಂದಣಿ ರದ್ದುಪಡಿಸಲು ಅವಕಾಶವಿದೆ.
ಜಿಲ್ಲೆಯಲ್ಲಿ ಬಹಳಷ್ಟು ಸಂಘ, ಸಂಸ್ಥೆಗಳ ನೋಂದಣಿಯನ್ನು ನಿರಂತರ 5 ವರ್ಷಗಳಿಂದ ನವೀಕರಿಸಿಲ್ಲ. ಇಂತಹ ಸಂಘ ಸಂಸ್ಥೆಗಳಿಗೆ ₹ 500 ದಂಡ ಪಾವತಿಸಿ ಡಿ. 31ರೊಳಗೆ ನೋಂದಣಿ ನವೀಕರಣ ಮಾಡಿಸಬೇಕು. ಇಲ್ಲವಾದರೆ ಸಂಘ, ಸಂಸ್ಥೆಗಳನ್ನು ರದ್ದುಪಡಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.