ADVERTISEMENT

ಪೇಮೆಂಟ್‌ ಮಾರುಕಟ್ಟೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 7:39 IST
Last Updated 1 ಏಪ್ರಿಲ್ 2021, 7:39 IST
ಶ್ರೀನಿವಾಸಪುರದ ಟಿಎಪಿಸಿಎಂಎಸ್ ನಿರ್ದೇ‌ಶಕರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ ಮಾತನಾಡಿದರು
ಶ್ರೀನಿವಾಸಪುರದ ಟಿಎಪಿಸಿಎಂಎಸ್ ನಿರ್ದೇ‌ಶಕರ ಸಭೆಯಲ್ಲಿ ಸಂಘದ ಅಧ್ಯಕ್ಷ ಬಗ್ಗಲಘಟ್ಟ ಶ್ರೀನಿವಾಸರೆಡ್ಡಿ ಮಾತನಾಡಿದರು   

ಕೆಜಿಎಫ್‌: ಬೆಮಲ್‌ ನೌಕರರಿಗೆ ಸಂಬಳವಾಗುವ ತಿಂಗಳ ಕೊನೆ ದಿನದಂದು ಬೆಮಲ್‌ ನಗರದಲ್ಲಿ ನಡೆಯುವ ಪೇಮೆಂಟ್ ಮಾರ್ಕೆಟ್‌ ಅನ್ನು ಡಿಕೆ ಹಳ್ಳಿ ಪಂಚಾಯಿತಿ ಅಧಿಕಾರಿಗಳು ಕೋವಿಡ್‌ ಹಿನ್ನೆಲೆಯಲ್ಲಿ ನಡೆಯಲು ಬುಧವಾರ ಅವಕಾಶ ನೀಡಲಿಲ್ಲ.

ಮುಂಜಾನೆಯಿಂದಲೇ ನೂರಾರು ಪರಸ್ಥಳದ ವರ್ತಕರು ವಾಹನಗಳಲ್ಲಿ ಮಾರಾಟದ ವಸ್ತುಗಳನ್ನು ತಂದು ಆಲದಮರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮಾಯಿಸಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಜನ ಸೇರುವ ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ಮಂಗಳವಾರ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್ ಮತ್ತು ಸಿಬ್ಬಂದಿ ವರ್ತಕರಿಗೆ ಅಂಗಡಿ ಇಡಲು ಅವಕಾಶ ನೀಡಲಿಲ್ಲ.

ಮಧ್ಯಾಹ್ನದ ವೇಳೆಗೆ ವರ್ತಕರು ನಗರಸಭೆಗೆ ಸೇರುವ ಕೋರಮಂಡಲ್‌ ಟೋಲ್‌ಗೇಟ್‌ ಬಳಿಯ ಕೆಜಿಎಫ್‌–ಬಂಗಾರಪೇಟೆ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ಪೇಮೆಂಟ್‌ ಮಾರುಕಟ್ಟೆ ಸ್ಥಾಪಿಸಿದರು. ಬೆಮಲ್‌ ನಗರ ಪೊಲೀಸರು ಕೂಡ ಮೌನವಾಗಿದ್ದರು. ಮುಖ್ಯರಸ್ತೆಯಲ್ಲಿ ಜನಜಂಗುಳಿ ಹೆಚ್ಚಾಗುತ್ತಿದ್ದಂತೆಯೇ, ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್ ವೆಂಕಟರಮಣಪ್ಪ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಅಂಗಡಿಗಳನ್ನು ಎತ್ತಂಗಡಿ ಮಾಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.