ADVERTISEMENT

ಎಸ್‌ಎಫ್‌ಸಿಎಸ್‌ ಚುನಾವಣೆ: ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 15:45 IST
Last Updated 9 ಜನವರಿ 2020, 15:45 IST

ಕೋಲಾರ: ತಾಲ್ಲೂಕಿನ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘದ (ಎಸ್‌ಎಫ್‌ಸಿಎಸ್) ನಿರ್ದೇಶಕರ ಸ್ಥಾನಕ್ಕೆ ಶಾಸಕ ಕೆ.ಶ್ರೀನಿವಾಸಗೌಡ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಗೋವಿಂದಗೌಡ ಅವಿರೋಧ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನ ಅಣ್ಣಿಹಳ್ಳಿ, ಮದ್ದೇರಿ, ಸುಗಟೂರು ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘಗಳಿಗೆ ನಡೆದ ಚುನಾವಣೆಗೆ ಯಾವುದೇ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸದ ಕಾರಣ ಈ ಮೂರು ಸಂಘಗಳ ನಿರ್ದೇಶಕರ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ.
ಅಣ್ಣಿಹಳ್ಳಿ ಸೊಸೈಟಿ ಮೂಲಕವೇ ಸಹಕಾರಿ ಕ್ಷೇತ್ರ ಪ್ರವೇಶಿಸಿದ್ದ ಶಾಸಕ ಶ್ರೀನಿವಾಸಗೌಡರು ಸಾಮಾನ್ಯ ಕ್ಷೇತ್ರದಿಂದ ಆಯ್ಕೆಯಾದರು.

ಗೋವಿಂದಗೌಡರು ಇದೇ ಸೊಸೈಟಿಯ ಠೇವಣಿದಾರರ ಕ್ಷೇತ್ರದಿಂದ ಪುನರಾಯ್ಕೆಯಾದರು. ಇದೇ ಸಂಘಕ್ಕೆ ನಿರ್ದೇಶಕರಾಗಿ ಟಿ.ನಾರಾಯಣಸ್ವಾಮಿ, ಎನ್.ಮುನೇಗೌಡ, ಸುಬ್ರಮಣಿ, ಎಂ.ಮುನಿವೆಂಕಟಪ್ಪ, ವಿ.ಬ್ಯಾಟಪ್ಪ, ಟಿ.ಮುನಿವೆಂಕಟಪ್ಪ, ಲಕ್ಷ್ಮಮ್ಮ, ವನಿತಾ, ಆರ್.ನಾಗರಾಜ್ ಸಹ ಆಯ್ಕೆಯಾಗಿದ್ದಾರೆ.

ADVERTISEMENT

ಸುಗಟೂರು ಸೊಸೈಟಿ ಅಧ್ಯಕ್ಷರಾಗಿ ಟಿ.ವಿ.ತಿಮ್ಮರಾಯಪ್ಪ, ನಿರ್ದೇಶಕರಾಗಿ ಡಿ.ಗೋಪಾಲಪ್ಪ, ಅಮರ ನಾರಾಯಣಸ್ವಾಮಿ, ವೆಂಕಟಮ್ಮ, ಎಂ.ಎಸ್.ರಮಣರೆಡ್ಡಿ, ವೆಂಕಟರಾಮಪ್ಪ, ರುಕ್ಕಮ್ಮ, ಎ.ಸಿ.ಭಾಸ್ಕರ್, ವೆಂಕಟರಾಮರೆಡ್ಡಿ, ಎನ್.ಗೋಪಾಲಗೌಡ, ಸವಿತಾ ಎನ್.ಶೆಟ್ಟಿ ಆಯ್ಕೆಯಾದರು.

ಮದ್ದೇರಿ ಸೊಸೈಟಿಗೆ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ರಮೇಶ್ ಸಾಮಾನ್ಯ ಕ್ಷೇತ್ರದಿಂದ ಅವಿರೋಧ ಆಯ್ಕೆಯಾಗಿದರು. ನಿರ್ದೇಶಕರಾಗಿ ಎಂ.ಆರ್.ಶ್ರೀನಿವಾಸಗೌಡ, ವಿ.ಕೃಷ್ಣಪ್ಪ, ಎಂ.ಮಲ್ಲೇಗೌಡ, ಎನ್.ವೆಂಕಟರೆಡ್ಡಿ, ಎಂ.ವೆಂಕಟಸ್ವಾಮಿ, ಎಂ.ವೆಂಕಟರಾಮ್, ಬಿ.ಶ್ರೀನಿವಾಸಲು, ನಾರಾಯಣಮ್ಮ, ನಾರಾಯಣಪ್ಪ, ಈರಮ್ಮ, ಮುನಿರಾಮಕ್ಕ ಅವಿರೋಧ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.