ADVERTISEMENT

ಮಂಗಳಮುಖಿಗೆ ಎಸ್‌ಐ ಕಪಾಳಮೋಕ್ಷ

​ಪ್ರಜಾವಾಣಿ ವಾರ್ತೆ
Published 10 ಮೇ 2021, 13:49 IST
Last Updated 10 ಮೇ 2021, 13:49 IST
ಕೋಲಾರದಲ್ಲಿ ಸೋಮವಾರ ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಸ್ಮಿತಾ ಎಂಬ ಮುಂಗಳಮುಖಿಯನ್ನು ಎಸ್‌ಐ ವೇದಾವತಿ ತಲೆಗೂದಲು ಹಿಡಿದು ಎಳೆದೊಯ್ದರು.
ಕೋಲಾರದಲ್ಲಿ ಸೋಮವಾರ ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘಿಸಿ ಬೈಕ್‌ನಲ್ಲಿ ಹೋಗುತ್ತಿದ್ದ ಸ್ಮಿತಾ ಎಂಬ ಮುಂಗಳಮುಖಿಯನ್ನು ಎಸ್‌ಐ ವೇದಾವತಿ ತಲೆಗೂದಲು ಹಿಡಿದು ಎಳೆದೊಯ್ದರು.   

ಕೋಲಾರ: ಲಾಕ್‌ಡೌನ್‌ ಮಾರ್ಗಸೂಚಿ ಉಲ್ಲಂಘಿಸಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸ್ಮಿತಾ ಎಂಬ ಮಂಗಳಮುಖಿಗೆ ನಗರದ ಗಲ್‌ಪೇಟೆ ಠಾಣೆ ಎಸ್‌ಐ ವೇದಾವತಿ ಅವರು ಸೋಮವಾರ ಕಪಾಳಮೋಕ್ಷ ಮಾಡಿದರು.

ಜನರು ಅಗತ್ಯ ವಸ್ತುಗಳ ಖರೀದಿಗೆ ವಾಹನದಲ್ಲಿ ಬರಬಾರದೆಂದು ಸರ್ಕಾರ ಲಾಕ್‌ಡೌನ್‌ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ, ಸ್ಮಿತಾ ಅವರು ಸೋಪ್‌ ಖರೀದಿಸಲು ಬೈಕ್‌ನಲ್ಲಿ ಬೆಳಿಗ್ಗೆ ನಗರದ ಅಮ್ಮವಾರಿಪೇಟೆ ವೃತ್ತದಲ್ಲಿನ ಅಂಗಡಿಗೆ ಬಂದಿದ್ದರು.

ಅವರ ಬೈಕ್‌ ತಡೆದ ಎಸ್‌ಐ ವೇದಾವತಿ ಜತೆ ಸ್ಮಿತಾ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ನಿರ್ವಹಣೆಗೆ ಅಡ್ಡಿಪಡಿಸಿದರು. ಆಗ ವೇದಾವತಿ ಅವರು ಸ್ಮಿತಾರ ತಲೆಗೂದಲು ಹಿಡಿದು ಠಾಣೆಗೆ ಎಳೆದೊಯ್ಯಲು ಮುಂದಾದರು. ಇದಕ್ಕೆ ಪ್ರತಿರೋಧ ತೋರಿದ ಸ್ಮಿತಾ ಪೊಲೀಸರ ವಿರುದ್ಧ ತಿರುಗಿಬಿದ್ದರು.

ADVERTISEMENT

ಬಳಿಕ ವೇದಾವತಿ ಅವರು ಸ್ಮಿತಾಗೆ ಕಪಾಳಮೋಕ್ಷ ಮಾಡಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿ ವಾಹನಕ್ಕೆ ಹತ್ತಿಸಿದರು. ನಂತರ ಸ್ಮಿತಾ ಕ್ಷಮೆ ಕೋರಿದ್ದರಿಂದ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದರು. ಲಾಠಿ ಏಟಿನಿಂದ ಸ್ಮಿತಾರ ಬಲ ಕೈಗೆ ತೀವ್ರ ಪೆಟ್ಟಾಗಿ ರಕ್ತ ಸ್ರಾವವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.