ADVERTISEMENT

ಜಾಲಪ್ಪರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2021, 13:04 IST
Last Updated 12 ಡಿಸೆಂಬರ್ 2021, 13:04 IST
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಭಾನುವಾರ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪರ ಆರೋಗ್ಯ ವಿಚಾರಿಸಿದರು
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಭಾನುವಾರ ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪರ ಆರೋಗ್ಯ ವಿಚಾರಿಸಿದರು   

ಕೋಲಾರ: ಕೇಂದ್ರದ ಮಾಜಿ ಸಚಿವ ಆರ್‌.ಎಲ್‌.ಜಾಲಪ್ಪ ಅವರ ಆರೋಗ್ಯ ಸ್ಥಿರವಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ ಜಾಲಪ್ಪರ ಆರೋಗ್ಯ ವಿಚಾರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಜಾಲಪ್ಪ ಅವರು 35 ದಿನದಿಂದ ವೆಂಟಿಲೇಟರ್‌ ಸಂಪರ್ಕದಲ್ಲಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಅವರಿಗೆ ಡಯಾಲಿಸಿಸ್‌ ಮಾಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ಬೇಗನೆ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದರು.

‘ಜಾಲಪ್ಪ ಅವರಿಗೆ 97 ವರ್ಷ ವಯಸ್ಸಾಗಿದ್ದರೂ ಅವರ ಸ್ಮರಣ ಶಕ್ತಿ ಚೆನ್ನಾಗಿದೆ. ನಾನು ಬಂದಿದ್ದೇನೆ ಎಂದು ಜೋರಾಗಿ ಕೂಗಿ ಹೇಳಿದಾಗ ಕಣ್ಣು ಬಿಟ್ಟು ನೋಡಿದರು. ನಾವು ಜನತಾ ಪರಿವಾರದಿಂದಲೂ ಒಟ್ಟಿಗಿದ್ದೇವೆ. ಜಾಲಪ್ಪ ಅವರು ಸದಾ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಪರವಾಗಿದ್ದರು. ಕೋಲಾರ ಜಿಲ್ಲೆಯಿಂದಲೇ ಅಹಿಂದ ಆರಂಭವಾಗಿದ್ದು, ಜಾಲಪ್ಪ ಕೋಲಾರದಲ್ಲಿ ಅಹಿಂದ ಕಾರ್ಯಕ್ರಮ ಆಯೋಜಿಸಿದ್ದರು. ನಾನು ಬಂದು ಉದ್ಘಾಟಿಸಿದ್ದೆ’ ಎಂದು ಸ್ಮರಿಸಿದರು.

ADVERTISEMENT

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.