
ಪ್ರಜಾವಾಣಿ ವಾರ್ತೆ
ಮುಳಬಾಗಿಲು: ತಾಯಿ ಸಾವಿನಿಂದ ಮನನೊಂದ ಮಗ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮ್ಮರೆಡ್ಡಿಹಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲ್ಲೂಕಿನ ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮರೆಡ್ಡಿಹಳ್ಳಿಯ ಅಭಿಷೇಕ್ (18) ಮೃತರು.
ಅಭಿಷೇಕ್ ಮುಳಬಾಗಿಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ ಓದಿತ್ತಿದ್ದರು. ತಾಯಿ ಎಂದರೆ ಬಹಳ ಪ್ರೀತಿ. 20 ದಿನಗಳ ಹಿಂದೆ ಅನಾರೋಗ್ಯದಿಂದ ಅಭಿಷೇಕ್ ತಾಯಿ ರಾಧ (39) ಮೃತಪಟ್ಟಿದ್ದರು. ಈ ನೋವಿನಿಂದ ಹೊರಬರಲಾಗದೆ ಅಭಿಷೇಕ್ ಸೋಮವಾರ ತೋಟಕ್ಕೆ ಸಿಂಪಡಿಸುವ ಔಷಧಿ ಕುಡಿದಿದ್ದಾನೆ. ಈ ವಿಚಾರ ತಿಳಿದ ಸ್ಥಳೀಯರು ಕೂಡಲೇ ಕೋಲಾರ ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಕೈ ಮೀರಿದ್ದು ಮೃತಪಟ್ಟಿದ್ದಾನೆ.
ಮೃತರ ಅಂತ್ಯಕ್ರಿಯೆ ತಮ್ಮರೆಡ್ಡಿಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.