ADVERTISEMENT

ಸಹಜೀವನ ನಡೆಸುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ: ಕೋಲಾರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 13:13 IST
Last Updated 28 ಆಗಸ್ಟ್ 2023, 13:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    ಸಂಗ್ರಹ ಚಿತ್ರ

ನಂಗಲಿ( ಮುಳಬಾಗಿಲು): ನಂಗಲಿಯಲ್ಲಿ ಭಾನುವಾರ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೋಲಾರ ತಾಲ್ಲೂಕು ರಾಮಸಂದ್ರ ಗ್ರಾಮದ ಭಾಗ್ಯ( 25) ಆತ್ಮಹತ್ಯೆ ಮಾಡಿಕೊಂಡವರು.

ಭಾಗ್ಯ ಅವರನ್ನು ಏಳು ವರ್ಷಗಳ ಹಿಂದೆ ಆಂಧ್ರಪ್ರದೇಶದ ರೆಡ್ಡಿ ಚೆರುವುಪಲ್ಲಿಯ ಗಂಗಾಧರ್ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಗಂಗಾಧರ್ ಮೃತಪಟ್ಟ ಬಳಿಕ ತಾಲ್ಲೂಕಿನ ಸಿದ್ದನಹಳ್ಳಿಯ ರವೀಂದ್ರ ಎನ್ನುವವರ ಜೊತೆ ಸಹ ಜೀವನ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುವ ರವೀಂದ್ರ ವಾರಕ್ಕೊಮ್ಮೆ ನಂಗಲಿಯ ಭಾಗ್ಯ ಅವರ ಬಾಡಿಗೆ ಮನೆಗೆ ಬರುತ್ತಿದ್ದರು.

ADVERTISEMENT

ಭಾನುವಾರ ಭಾಗ್ಯ ಅವರು ತಮ್ಮ ಆರು ವರ್ಷ ಮಗಳನ್ನು ಹೋಟೆಲ್‌ಗೆ ಕಳುಹಿಸಿ, ಸೀರೆಯಿಂದ ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.