
ಬಂಗಾರಪೇಟೆ: ನಗರದ ಬಸವೇಶ್ವರ ವೃತ್ತದಲ್ಲಿ ಸುತ್ತೂರು ಮಠ ಹಮ್ಮಿಕೊಳ್ಳಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರದ ರಥವು ಶನಿವಾರ ಬಂಗಾರಪೇಟೆಗೆ ಆಗಮಿಸಿತು. ಜಾತ್ರೆಯ ಪ್ರಚಾರದ ರಥವನ್ನು ವೀರಶೈವ ಸಮಾಜದವರು ಅದ್ದೂರಿಯಾಗಿ ಸ್ವಾಗತಿಸಿದರು.
ವೀರಶೈವ ಸಮಾಜದ ಮುಖಂಡ ಕೆ.ಸಿ. ಉಮೇಶ್ ಮಾತನಾಡಿ, ‘ವೀರಶೈವ ಲಿಂಗಾಯ ಸಮುದಾಯ ಮತ್ತು ಮಠಗಳ ಸಂಬಂಧ ಅನಾದಿ ಕಾಲದಿಂದಲೂ ಉತ್ತಮವಾಗಿದೆ. ಮಠಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿ ಉಳಿಯದೆ ಸಮಾಜದ ಬೆನ್ನೆಲುಬಾಗಿ ನಿಂತಿವೆ. ಮಠಗಳ ಉದ್ಧಾರಕ್ಕಾಗಿ ಸಮುದಾಯದವರು ಶ್ರಮಿಸಬೇಕು’ ಎಂದು ಹೇಳಿದರು.
ರಥದ ಸಂಚಾಲಕ ಪಂಚಾಕರಿ ಮಾತನಾಡಿ, ಈ ವರ್ಷವೂ ಜ. 15 ರಿಂದ 20ರವರೆಗೆ ಜಾತ್ರೆ ಜರುಗಲಿದೆ. ಪ್ರತಿನಿತ್ಯ ಉತ್ಸವ ಮೂರ್ತಿ, ಗದ್ದುಗೆ ಪೂಜೆ, ಹಾಲರವಿ ಉತ್ಸವ, ಸೋಮೇಶ್ವರ ಕುಂಬಾಭಿಷೇಕ, ವೀರಭದ್ರ ಪೂಜೆ ಕುಂಡೋತ್ಸವ ನಡೆಯಲಿದೆ ಎಂದರು. ಕಾರ್ಯಕ್ರಮಕ್ಕೆ ಮಠಾಧಿಪತಿಗಳು, ರಾಜ್ಯಪಾಲರು, ಮುಖ್ಯಮಂತ್ರಿ, ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು ಆಗಮಿಸಲಿದ್ದಾರೆ ಎಂದರು.
ವೀರಶೈವ ಸಮಾಜದ ಉಮೇಶ್, ಕೆ.ಜಿ. ನಂಜಪ್ಪ, ಬಳೆ ಮಂಜು, ಬಿಜಿ ನಂಜಪ್ಪ, ರು.ವಿಜಕುಮಾರ್, ಬಿ.ಪಿ. ಮಹೇಶ್, ಮಂಜುನಾಥ್, ಮಂಜುಶ್ರೀ, ನಿರಂಜನ್, ಲೋಕೇಶ್, ಅಕ್ಕನ ಬಳಗದ ವಿಜಯ, ಕುಮುದಿನಿ, ಶಿವಗೀತಾ, ಪೂರ್ಣಿಮಾ ಕಿರಣ್, ಗೀತಾಮಹದೇವ್, ಅಂಬಿಕಾ, ಲತಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.