ADVERTISEMENT

ಟೇಕಲ್: ಬಾರದ ಮಳೆ; ಬತ್ತಿದ ಕೆರೆಕುಂಟೆಗಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2024, 13:01 IST
Last Updated 1 ಅಕ್ಟೋಬರ್ 2024, 13:01 IST
ಮಳೆಯಿಲ್ಲದ ಕಾರಣ ತೇವಾಂಶದ ಕೊರತೆಯಾಗಿ ಒಣಗುತ್ತಿರುವ ರಾಗಿ ಮತ್ತು ಅವರೆ ಬೆಳೆ
ಮಳೆಯಿಲ್ಲದ ಕಾರಣ ತೇವಾಂಶದ ಕೊರತೆಯಾಗಿ ಒಣಗುತ್ತಿರುವ ರಾಗಿ ಮತ್ತು ಅವರೆ ಬೆಳೆ   

ಟೇಕಲ್: ಮುಂಗಾರು ಆರಂಭವಾಗಿ ಮೂರ್ನಾಲ್ಕು ತಿಂಗಳು ಕಳೆದರೂ, ಮಾಲೂರು ತಾಲ್ಲೂಕಿನಲ್ಲಿ ಸಮರ್ಪಕ ರೀತಿಯ ಮಳೆ ಸುರಿದಿಲ್ಲ. ಇದರಿಂದಾಗಿ ತಾಲ್ಲೂಕಿನಾದ್ಯಂತ ಇರುವ ಕೆರೆಕುಂಟೆಗಳು ಬತ್ತಿ ಹೋಗುತ್ತಿವೆ. ಜನರು ಮತ್ತು ಜಾನುವಾರುಗಳು ಹನಿ ನೀರಿಗೂ ಪರಿತಪಿಸಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಸಂಕಷ್ಟ ತೋಡಿಕೊಂಡರು. 

ಜೂನ್ ತಿಂಗಳಿನಲ್ಲೇ ಮುಂಗಾರು ಆರಂಭವಾಗಿದೆ. ಉತ್ತಮ ಮಳೆಯಾಗಿದ್ದರೆ ಇಷ್ಟೊತ್ತಿಗಾಗಲೇ ಸುತ್ತಮುತ್ತಲಿನ ಕೆರೆಕುಂಟೆಗಳಲ್ಲಿ ನೀರು ಸಂಗ್ರಹವಾಗಬೇಕಿತ್ತು. ಇದರಿಂದ ದನಕರುಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಉತ್ತಮವಾಗಿ ಮಳೆ ಸುರಿಯದ ಕಾರಣದಿಂದಾಗಿ ಕಡಲೆ, ರಾಗಿ, ಅವರೆ, ಮೆಕ್ಕೆಜೋಳ, ತೊಗರಿ ಸೇರಿದಂತೆ ಬಿತ್ತನೆ ಮಾಡಲಾದ ಇತರ ಬೆಳೆಗಳು ಬಾಡುವ ಹಂತಕ್ಕೆ ತಲುಪಿವೆ ಎಂದು ರೈತರು ತಲೆಯ ಮೇಲೆ ಕೈಹೊತ್ತರು. 

ಮಳೆಯಾಗದ ಪರಿಣಾಮ ಟೇಕಲ್ ಹೋಬಳಿಯ ಕೆಂಚುಗಾರನ ಕೆರೆಯಲ್ಲಿ ನೀರು ಬತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT