ADVERTISEMENT

ಪೌರ ಕಾರ್ಮಿಕರ ಪಾತ್ರ ಹಿರಿದು: ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 7:12 IST
Last Updated 24 ಸೆಪ್ಟೆಂಬರ್ 2021, 7:12 IST
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿದರು. ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಬಾಲಕೃಷ್ಣ, ರಾಮಚಂದ್ರಪ್ಪ, ಅನ್ನೀಸ್ ಅಹ್ಮದ್, ಭಾಸ್ಕರ್, ಬಿ. ವೆಂಕಟರೆಡ್ಡಿ, ರಾಜು ಇದ್ದರು
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಮಾತನಾಡಿದರು. ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಬಾಲಕೃಷ್ಣ, ರಾಮಚಂದ್ರಪ್ಪ, ಅನ್ನೀಸ್ ಅಹ್ಮದ್, ಭಾಸ್ಕರ್, ಬಿ. ವೆಂಕಟರೆಡ್ಡಿ, ರಾಜು ಇದ್ದರು   

ಶ್ರೀನಿವಾಸಪುರ: ನಾಗರಿಕರ ಆರೋಗ್ಯ ರಕ್ಷಣೆಯಲ್ಲಿ ಪೌರ ಕಾರ್ಮಿಕರ ಪಾತ್ರ ಹಿರಿದು. ಅವರು ತಮ್ಮ ಸೇವೆ ಮೂಲಕ ಸಮಾಜದ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ ಹೇಳಿದರು.

ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಅಗತ್ಯ ಗಮನ ನೀಡಬೇಕು. ಕಾರ್ಯ ನಿರ್ವಹಣೆ ಸಮಯದಲ್ಲಿ ಸುರಕ್ಷತಾ ಪರಿಕರ ಧರಿಸಬೇಕು. ಪೌರ ಕಾರ್ಮಿಕರು ಆರೋಗ್ಯದಿಂದ ಇದ್ದಾಗ ಮಾತ್ರ ಜನರ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ಪೌರ ಕಾರ್ಮಿಕರು ವೈಯಕ್ತಿಕ ಆರೋಗ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡಬೇಕು. ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು ಹಾಗೂ ಸದಸ್ಯರ ಸಲಹೆ, ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ನಾಗರಿಕರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸಬೇಕು ಎಂದು
ಹೇಳಿದರು.

ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಆಟೋಟಗಳಲ್ಲಿ ಗೆದ್ದಿದ್ದ ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು. ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ಎಂ.ಎನ್. ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಪೌರ ಕಾರ್ಮಿಕರಾದ ಬಾಲಕೃಷ್ಣ, ರಾಮಚಂದ್ರಪ್ಪ, ಸದಸ್ಯರಾದ ಅನ್ನೀಸ್ ಅಹ್ಮದ್, ಭಾಸ್ಕರ್, ಬಿ. ವೆಂಕಟರೆಡ್ಡಿ, ರಾಜು, ವಿನೋದ್, ರಮೇಶ್, ಆರೋಗ್ಯ ನಿರೀಕ್ಷಕ ಎಂ. ಪೃಥ್ವಿರಾಜ್, ಪರಿಸರ ಅಧಿಕಾರಿ ಡಿ. ಶೇಖರರೆಡ್ಡಿ, ಆರ್.ಒ ನಾಗರಾಜ್, ಕಂದಾಯ ನಿರೀಕ್ಷಕ ಶಂಕರ್ ಸಿಎಒ ರಾಜೇಶ್ವರಿ, ನಾಗೇಶ್, ವೇದಾಂತ್ ಶಾಸ್ತ್ರಿ, ಸುರೇಶ್, ಸಂತೊಷ್, ಪ್ರತಾಪ್, ಮಮತಾ, ಜಯಶ್ರೀ, ಶಾರದಾ, ಭಾಗ್ಯಮ್ಮ, ಬಾಲಕೃಷ್ಣ, ಸತೀಶ್, ರಾಮಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.