ADVERTISEMENT

ಅಂಬ್ಲಿಕಲ್ ಗ್ರಾ.ಪಂ. ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 2:23 IST
Last Updated 11 ಅಕ್ಟೋಬರ್ 2021, 2:23 IST
ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೊತ್ತೂರು ಮುನೆಪ್ಪ ಅವರನ್ನು ಅಧ್ಯಕ್ಷೆ ಪೂಜಾ ಚಲಪತಿ ಹಾಗೂ ಸದಸ್ಯರು ಅಭಿನಂದಿಸಿದರು. ಪಿಡಿಒ ವಿ. ಕೃಷ್ಣಪ್ಪ, ಮರೇರು ವೆಂಕಟರವಣಪ್ಪ ಇದ್ದರು
ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಕೊತ್ತೂರು ಮುನೆಪ್ಪ ಅವರನ್ನು ಅಧ್ಯಕ್ಷೆ ಪೂಜಾ ಚಲಪತಿ ಹಾಗೂ ಸದಸ್ಯರು ಅಭಿನಂದಿಸಿದರು. ಪಿಡಿಒ ವಿ. ಕೃಷ್ಣಪ್ಪ, ಮರೇರು ವೆಂಕಟರವಣಪ್ಪ ಇದ್ದರು   

ನಂಗಲಿ: ಅಂಬ್ಲಿಕಲ್ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕೊತ್ತೂರು ಮುನೆಪ್ಪ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿದ್ದ ಎ.ಎಂ. ಶಂಕರಪ್ಪ ಇತ್ತೀಚೆಗೆ ಕೊರೊನಾ ದಿಂದ ಸಾವನ್ನಪ್ಪಿದ್ದರಿಂದ ಉಪಾಧ್ಯಕ್ಷರ ಸ್ಥಾನ ಖಾಲಿಯಾಗಿತ್ತು. ಚುನಾವಣಾಧಿಕಾರಿ ರವೀಂದ್ರಕುಮಾರ್ ನೇತೃತ್ವದಲ್ಲಿ ಇತ್ತೀಚೆಗೆ ಪಂಚಾಯಿತಿ ಕೇಂದ್ರದಲ್ಲಿ ಚುನಾವಣೆ ನಡೆಯಿತು. ಎಲ್ಲಾ ಸದಸ್ಯರು ಮುನೆಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂಜಾ ಚಲಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ. ಕೃಷ್ಣಪ್ಪ, ಮರೇರು ವೆಂಕಟರವಣಪ್ಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.