ADVERTISEMENT

ಬೆಳೆ ಸಮೀಕ್ಷೆಗೆ ಗ್ರಾಮ ಸ್ವಯಂಸೇವಕರು

ಸಮೀಕ್ಷೆಯಲ್ಲಿ ಮುಳಬಾಗಿಲು ತಾಲ್ಲೂಕು ಜಿಲ್ಲೆಯಲ್ಲೇ ಪ್ರಥಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 3:25 IST
Last Updated 11 ಸೆಪ್ಟೆಂಬರ್ 2020, 3:25 IST
ಮುಳಬಾಗಿಲು ತಾಲ್ಲೂಕು ತಾಯಲೂರು ಪುಲಿಪಾಪೇನಹಳ್ಳಿ ಗ್ರಾಮವೊಂದರಲ್ಲಿ ಬೆಳೆ ಸಮೀಕ್ಷೆ ಮಾಡುವ ವೇಳೆ ರೈತರು, ಗ್ರಾಮ ಪ್ರತಿನಿಧಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು
ಮುಳಬಾಗಿಲು ತಾಲ್ಲೂಕು ತಾಯಲೂರು ಪುಲಿಪಾಪೇನಹಳ್ಳಿ ಗ್ರಾಮವೊಂದರಲ್ಲಿ ಬೆಳೆ ಸಮೀಕ್ಷೆ ಮಾಡುವ ವೇಳೆ ರೈತರು, ಗ್ರಾಮ ಪ್ರತಿನಿಧಿಗಳು, ಕಂದಾಯ ಇಲಾಖೆ ಸಿಬ್ಬಂದಿ ಹಾಜರಿದ್ದರು   

ಮುಳಬಾಗಿಲು: ಬೆಳೆ ಸಮೀಕ್ಷೆ ಯೋಜನೆಗೆ ತಾಲ್ಲೂಕಿನ ರೈತರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಗ್ರಾಮಗಳಲ್ಲಿರುವ ವಿದ್ಯಾವಂತ ಯುವಕರನ್ನೇ (ಗ್ರಾಮದ ಸ್ವಯಂಸೇವಕರು) ಆಯ್ದುಕೊಂಡು ಅವರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ.

ಗ್ರಾಮದ ಸ್ವಯಂಸೇವಕರಿಗೆ ಒಂದು ಸರ್ವೆ ನಂಬರ್ ಪ್ಲಾಟ್‌ಗೆ ₹10 ಪಾವತಿ ಮಾಡಲಾಗುತ್ತದೆ. ಗ್ರಾಮದ ರೈತರನ್ನು ಅವರ ಜಮೀನಿನ ಬಳಿ ಕರೆದುಕೊಂಡು ಹೋಗಿ ಅವರ ಹೊಲದಲ್ಲಿ ಬೆಳೆದಿರುವ ಬೆಳೆಯನ್ನು ರೈತರ ಆ್ಯಪ್‌ನಲ್ಲಿ ದಾಖಲಿಸಬೇಕು.

2020ರ ಬೆಳೆ ಸಮೀಕ್ಷೆಯ ಮೂಲ ಉದ್ದೇಶ ರೈತರ ಜಮೀನಿನಲ್ಲಿರುವ ಬೆಳೆ ಮಾಹಿತಿಯನ್ನು ರೈತರೇ ದಾಖಲಿಸಬೇಕು ಎಂಬುದು. ಇದಕ್ಕಾಗಿ ಗ್ರಾಮಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ ಹಲವಾರು ರೈತರ ಮೊಬೈಲ್‌ಗಳಿಗೆ ರೈತರ ಬೆಳೆ ಸಮೀಕ್ಷೆ ಆ್ಯಪ್‌ ಡೌನ್‌ಲೋಡ್ ಮಾಡಲಾಯಿತು.

ADVERTISEMENT

ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಾರದ ಕಾರಣ ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರು ಗ್ರಾಮಗಳಿಗೆ ತೆರಳಿ ವಿದ್ಯಾವಂತ ಯುವಕರನ್ನು ಆಯ್ಕೆ ಮಾಡಿದ ನಂತರ ಬೆಳೆ ಸಮೀಕ್ಷೆ ಪ್ರಗತಿ ಸ್ವಲ್ಪ ಮಟ್ಟಿಗೆ ಸುಧಾರಿಸಿದೆ.

***

ಮುಳಬಾಗಿಲು ತಾಲ್ಲೂಕು ಪ್ರಥಮ

‘ರೈತ ಪ್ರತಿನಿಧಿಗಳನ್ನು ಮನವೊಲಿಸಿ ಬೆಳೆ ಸಮೀಕ್ಷೆ ಮಾಡಿಸಲಾಗುತ್ತಿದೆ. ತಾಲ್ಲೂಕಿನ 1,54,966 ಸರ್ವೆ ನಂಬರ್‌ಗಳಲ್ಲಿ ಇದುವರೆಗೂ 78,684 ಸರ್ವೆ ನಂಬರ್‌ಗಳ ಬೆಳೆ ಸಮೀಕ್ಷೆ ನಡೆದಿದೆ. ಒಟ್ಟು ಶೇ 50.78ರಷ್ಟು ಪ್ರಗತಿ ಸಾಧಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಮುಳಬಾಗಿಲು ತಾಲ್ಲೂಕು ಮೊದಲ ಸ್ಥಾನದಲ್ಲಿದೆ’ ಎನ್ನುತ್ತಾರೆ ತಹಶೀಲ್ದಾರ್ ಕೆ.ಎನ್.ರಾಜಶೇಖರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.