
ಸಾವು
(ಪ್ರಾತಿನಿಧಿಕ ಚಿತ್ರ)
ಮುಳಬಾಗಿಲು: ಭತ್ತ ಬೇರ್ಪಡಿಸುವ ಯಂತ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.
ತಾಲ್ಲೂಕಿನ ದೊಡ್ಡ ಗೊಲ್ಲಹಳ್ಳಿ ಗ್ರಾಮದ ಶ್ಯಾಮಲಮ್ಮ( 45) ಮೃತರು.
ಈ ಮಹಿಳೆಯು ದೊಡ್ಡ ಗೊಲ್ಲಹಳ್ಳಿ ಗ್ರಾಮದ ಗಂಗಾಧರಪ್ಪ ಎಂಬುವವರ ಬಳಿ ಭತ್ತದ ತೆನೆ ಕಟಾವು ಮಾಡುವ ಕೂಲಿ ಕೆಲಸಕ್ಕೆಂದು ಹೋಗಿದ್ದರು. ಸಂಜೆ 4 ಗಂಟೆಯ ಸಮಯದಲ್ಲಿ ಭತ್ತದ ತೆನೆಯ ಕಟ್ಟನ್ನು ಯಂತ್ರಕ್ಕೆ ಹಾಕಲು ಯಂತ್ರದ ಸಮೀಪಕ್ಕೆ ಹೋಗಿದ್ದಾರೆ. ಆಗ ಅವರ ಸೀರೆಯು ಯಂತ್ರದ ಪಿಡಿ ಸಾಫ್ಟ್ ಜಾಯಿಂಟ್‌ಗೆ ತಗುಲಿಕೊಂಡಿದೆ. ನಂತರ ತಲೆಯು ಸಾಫ್ಟ್ ಜಾಯಿಂಟ್‌ಗೆ ಸಿಲುಕಿ ಕತ್ತು ತುಂಡಾಗಿ ಸ್ಥಳದಲ್ಲೇ ಮೃತಪಟ್ಟರು.
ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನಂಗಲಿ ಪೊಲೀಸ್ ಠಾಣೆ ಪಿಎಸ್‌ಐ ಎಚ್.ಡಿ.ವಿದ್ಯಾಶ್ರೀ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.