
ಪ್ರಜಾವಾಣಿ ವಾರ್ತೆ
ಕೋಲಾರ: ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಮಹಿಳೆಯರ ವಿಶ್ರಾಂತಿ ಕೊಠಡಿಯ ಉದ್ಘಾಟನೆ ಶನಿವಾರ ನಡೆಯಿತು.
ವಿವಿಧ ಕಂಪನಿಗಳು ಸಿಎಸ್‌ಆರ್ ನಿಧಿ ಯೋಜನೆಯಡಿ ನೀಡಿದ ₹ 25 ಲಕ್ಷ ಆರ್ಥಿಕ ನೆರವಿನಿಂದ ಈ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ ಪಾಲ್ಗೊಂಡಿದ್ದರು. ಪ್ರಾಂಶುಪಾಲ ಎ.ಮುನಿಶಾಮಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾಲೇಜಿನ ಇಂದ್ರಮ್ಮ, ಮುರಳೀಧರ್, ಪ್ಯಾಟ್ರಿಕ್ ರಾಜ್‌ಕುಮಾರ್, ಹೇಮಮಾಲಿನಿ, ಜ್ಯೋತಿ, ಅರಿವು ಶಿವಪ್ಪ, ಎಸ್.ಶೈಲಜಾ, ಚೆಲುವರಾಜು, ರಾಧಮ್ಮ, ರಾಧಿಕಾ, ಹಮೀಲಾ, ಸುಗುಣ, ವೆಂಕಟರಮಣಪ್ಪ, ಅರುಣ್ ಕುಮಾರ್, ಕಂಪನಿಯ ಪ್ರಮುಖರಾದ ಸಚಿನ್ ತಲರೇಜ, ಅಂಕಿತ್ ಶೆಟ್ಟಿ, ಪ್ರತೀಕ್ ಕುಮಾರ್, ಅನಿರುಧ್, ಸತೀಶ್ ಇದ್ದರು.