ADVERTISEMENT

ಅಕ್ರಮ ಗಣಿಗಾರಿಕೆ ಆರೋಪ: ತಡವರಿಸಿದ ಕಾಂಗ್ರೆಸ್ ನಾಯಕರು...!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 8:55 IST
Last Updated 20 ಸೆಪ್ಟೆಂಬರ್ 2011, 8:55 IST

ಕೊಪ್ಪಳ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡ ಅನಿಲ್ ಲಾಡ್ ಪತ್ನಿ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಹೆಸರುಗಳು ಲೋಕಾಯುಕ್ತರ ವರದಿಯಲ್ಲಿ ಪ್ರಸ್ತಾಪಗೊಂಡಿದ್ದರೂ ಪಕ್ಷ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಪತ್ರಕರ್ತರ ಪೃಶ್ನೆಗೆ ಕಾಂಗ್ರೆಸ್ ನಾಯಕರು ಸಮರ್ಪಕ ಉತ್ತರ ನೀಡದೇ ಜಾರಿಕೊಂಡ ಘಟನೆ ಸೋಮವಾರ ನಡೆಯಿತು.

ಪಕ್ಷದ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಮುಖಂಡರು, ಈ ಸಂಬಂಧ ಪತ್ರಕರ್ತರಿಂದ ತೂರಿ ಬಂದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿ ಜಾರಿಕೊಂಡರು.

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಅನಿಲ್‌ಲಾಡ್ ಪತ್ನಿ ಹೆಸರು ಲೋಕಾಯುಕ್ತರ ವರದಿಯಲ್ಲಿ ಕಾಣಿಸಿಕೊಂಡಿದ್ದು, ಈ ವಿಷಯದಲ್ಲಿ ರಾಜ್ಯ ಸರ್ಕಾರವೇ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಉತ್ತರಿಸಿದರು. ಇನ್ನು, ಈ ಸಂಬಂದ ಕೆಲವರಿಗೆ ಕೆಪಿಸಿಸಿ ನೊಟೀಸ್ ಜಾರಿ ಮಾಡಿದೆ ಎಂಬುದಾಗಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಹೇಳಿದರು.

ಆದರೆ, ಯಾವ ಯಾವ ಮುಖಂಡರಿಗೆ ನೋಟಿಸ್ ಜಾರಿ ಮಾಡಲಾಗಿದೆ, ಸದರಿ ನೊಟೀಸ್‌ಗೆ ಉತ್ತರ ನೀಡಲು ಎಷ್ಟು ದಿನಗಳ ಗಡುವು ನೀಡಲಾಗಿದೆ ಎಂಬ ಪೃಶ್ನೆಗಳಿಗೆ ಮುಖಂಡರು ಉತ್ತರಿಸಲು ತಡವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.