ADVERTISEMENT

ಅಕ್ಷರಗಳಲ್ಲೇ ಆಕಾರ- ಬಾಲಕನ ಕೈಚಳಕ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:35 IST
Last Updated 8 ಡಿಸೆಂಬರ್ 2012, 6:35 IST

ಕೊಪ್ಪಳ: ಬೆಳೆಯ ಸಿರಿಯ ಮೊಳಕೆಯಲ್ಲಿಯೇ ನೋಡು ಎಂಬ ಗಾದೆ ಮಾತಿನಂತೆ ನಗರದ ಕೇಂದ್ರೀಯ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿ ಯಶವಂತ್ ಅಕ್ಷರಗಳಲ್ಲಿಯೇ ವಿವಿಧ ಆಕೃತಿಗಳನ್ನು ಮೂಡಿಸುವ ಮೂಲಕ ಗಮನ ಸೆಳೆದಿದ್ದಾನೆ.

ಅಕ್ಷತಾ ಎಂಬ ಹೆಸರಿನಲ್ಲಿ ಆನೆಯ ಮುಖವನ್ನುಚಿತ್ರಿಸಿದ್ದರೆ, ಆದಿತ್ಯ ಎಂಬ ಹೆಸರಿನಲ್ಲಿ ಅಕ್ಷರಗಳನ್ನು         ಬಳಸಿ ಮನುಷ್ಯನ                           ಮುಖವನ್ನೇ ಮೂಡಸಿದ್ದಾನೆ.

`ಅರ್ಜುನ್' ನಲ್ಲಿರುವ ಅಕ್ಷರಗಳನ್ನು ಮರಿ ಆನೆಯ ಸೊಂಡಿಲಿನಂತೆ ಜೋಡಿಸಿದ್ದರೆ, `ನಿತಿನ್' ಪದದ ಅಕ್ಷರಗಳಲ್ಲಿ ಮೊಲ ಮೈದಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.