ADVERTISEMENT

ಅನ್ನದಾನೇಶ್ವರ ನಗರದಲ್ಲಿ ನೀರಿಗೂ ಗೋಳು!

​ಪ್ರಜಾವಾಣಿ ವಾರ್ತೆ
Published 1 ಮೇ 2011, 9:40 IST
Last Updated 1 ಮೇ 2011, 9:40 IST

ಕುಷ್ಟಗಿ:  ಪಟ್ಟಣದ ಅನ್ನದಾನೇಶ್ವರ ನಗರದಲ್ಲಿ ಕುಡಿಯುವ ನೀರಿನ ಪೂರೈಕೆ ಸ್ಥಗಿತಗೊಂಡಿದ್ದು ಸಾರ್ವಜನಿಕರು ಪರದಾಡುವಂತಾಗಿದೆ.

ಸದರಿ ನಗರದಲ್ಲಿ ಕಳೆದ ಹತ್ತು ಹದಿನೈದು ದಿನಗಳಿಂದ ನೀರು ಸರಬರಾಜು ಇಲ್ಲ, ಮಹಿಳೆಯರು, ಮಕ್ಕಳು ಎಲ್ಲ ಕೆಲಸ ಬಿಟ್ಟು ದೂರ ಇರುವ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿರುವ ಕೊಳವೆ ದುರಸ್ಥಿ ಸ್ಥಳಕ್ಕೆ ಹೋಗಿ ನೀರು ತರುವಂತಾಗಿದೆ.

ಪಟ್ಟಣದಲ್ಲಿ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎನ್ನಲಾಗುತ್ತಿದೆ ಆದರೆ ಈ ನಗರದಲ್ಲಿ ಮಾತ್ರ ಜನ ಒಂದೆಡೆ ಬೇಸಿಗೆ ಬೇಗೆ ಇನ್ನೊಂದೆಡೆ ನೀರಿನ ಅಭಾವದಿಂದ ಕಂಗೆಟ್ಟಿರುವುದಾಗಿ ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಈ ವಿಷಯವನ್ನು ಹಲವು ಬಾರಿ ಪುರಸಭೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಅಷ್ಟೇ ಅಲ್ಲ ಸ್ವತಃ ಪುರಸಭೆ ಮುಖ್ಯಾಧಿಕಾರಿಯೇ ಅನ್ನದಾನೇಶ್ವರ ನಗರ ಎಲ್ಲಿದೆ? ಎಂದು ಕೇಳುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರೆದರೆ ಪುರಸಭೆಗೆ ಮುತ್ತಿಗೆಹಾಕಿ ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಅಲ್ಲದೇ ನೀರು ಪೂರೈಕೆ ಮತ್ತಿತರೆ ವಿಷಯಗಳಿಗೆ ಮುಖ್ಯಾಧಿಕಾರಿ ಮೊಬೈಲ್‌ಗೆ ಜನ ಕರೆ ಮಾಡಿದರೆ ಬೇರೆ ಯಾರೋ ಅದನ್ನು ಸ್ವೀಕರಿಸಿ ಬೇಜವಾಬ್ದಾರಿಯಿಂದ ಮಾತನಾಡುತ್ತಾರೆ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.