ADVERTISEMENT

‘ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ಗೆ ಶ್ರೀರಕ್ಷೆ’

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 10:02 IST
Last Updated 26 ಅಕ್ಟೋಬರ್ 2017, 10:02 IST

ಯಲಬುರ್ಗಾ:  ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹೇಳಿದರು.

ತಾಲ್ಲೂಕಿನ ಸಂಕನೂರು ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಮನೆ ಮನೆಗೆ ಕಾಂಗ್ರೆಸ್’ ಅಭಿಯಾನದಲ್ಲಿ  ಮಾತನಾಡಿದ ಅವರು, ‘ಶೈಕ್ಷಣಿಕವಾಗಿ ಬೇರೆ ಯಾವುದೇ ಕ್ಷೇತ್ರದಲ್ಲಿ ಆಗದೇ ಇರುವಷ್ಟು ಅಭಿವೃದ್ಧಿ ತಾಲ್ಲೂಕಿನಲ್ಲಿ ಆಗಿದೆ. ರಾಷ್ಟ್ರೀಯ ಹೆದ್ದಾರಿ, ನೀರಾವರಿ ಹಾಗೂ ರೈಲು ಯೋಜನೆಗಳ ಅನುಷ್ಠಾನ ಸಮರ್ಪಕವಾಗಿ ಆಗಿವೆ’ ಎಂದು ಅಭಿಪ್ರಾಯಪಟ್ಟರು.

ಜಿ.ಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ ಮಾತನಾಡಿ, ‘ಕಾಂಗ್ರೆಸ್ ವಿರುದ್ಧ ಯಾವುದೇ ಸಂಘಟನೆ ಹುಟ್ಟಿಕೊಂಡರೂ ಅದಕ್ಕೆ ಯಾವುದೇ ಲಾಭವಾಗದು. ಇಂತಹ ಸಂಘಟನೆಗಳು ಸಾಕಷ್ಟು ಹುಟ್ಟಿಕೊಂಡಿವೆ. ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ಮಾಡುವವರಿಗೆ ಜನರು ಬುದ್ಧಿ ಕಲಿಸುತ್ತಾರೆ. ಯಾವುದೇ ಕುಟುಂಬ ಹಾಗೂ ಜಾತಿ ರಾಜಕಾರಣ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿರುವ ರಾಯರಡ್ಡಿಯವರಿಗೆ ಮತ್ತೆ ಉತ್ತಮ ಬೆಂಬಲ ದೊರೆಯಲಿದೆ’ ಎಂದು ಹೇಳಿದರು.

ADVERTISEMENT

ತಾ.ಪಂ ಸದಸ್ಯ ಶಾರದಾ ರಾಮಶೆಟ್ಟಿ, ಎಪಿಎಂಸಿ ಅಧ್ಯಕ್ಷ ರಾಮಣ್ಣ ಪ್ರಭಣ್ಣವರ, ಸಂಕನೂರು ಗ್ರಾ.ಪಂ ಅಧ್ಯಕ್ಷ ಮಹಾದೇವಪ್ಪ ಗುರಿಕಾರ, ಉಪಾಧ್ಯಕ್ಷೆ ಅನಿತಾ ಪಾಟೀಲ, ತಾ.ಪಂ ಮಾಜಿ ಅಧ್ಯಕ್ಷ ಸಂಗಪ್ಪ ಬಂಡಿ, ಮುಖಂಡರಾದ ಹನಮಂತರಾವ್ ದೇಸಾಯಿ, ಮಹಾಂತೇಶ ಗಾಣಿಗೇರ, ಬಸವರಾಜ ಜತ್ತಿ, ಛತ್ರಪ್ಪ ಛಲವಾದಿ, ಹೇಮರೆಡ್ಡಿ ರಡ್ಡೇರ, ಅಬ್ದುಲ್ ಖಾದರ, ಖಾಜಾಸಾಬ ಅಮರಾವತಿ, ಕನಕನಗೌಡ ಪಾಟೀಲ, ಬಸನಗೌಡ ಪೊಲೀಸ್ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.