ADVERTISEMENT

ಅಸುರಕ್ಷಿತ ಕೆಲಸಕ್ಕೆ ನಿಯೋಜನೆ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:30 IST
Last Updated 3 ಜನವರಿ 2014, 9:30 IST
ಸುರಕ್ಷತಾ ಕ್ರಮಕೈಗೊಳ್ಳದ ಸ್ಥಳದಲ್ಲಿ ನರೇಗಾ ಯೋಜನೆಯ ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿ ಕೂಲಿಕಾರರು ಈಚೆಗೆ ಗಂಗಾವತಿಯ ತಾಲ್ಲೂಕು ಪಂಚಾಯಿತಿ ಮುಂದೆ ಧರಣಿ ನಡೆಸಿದರು
ಸುರಕ್ಷತಾ ಕ್ರಮಕೈಗೊಳ್ಳದ ಸ್ಥಳದಲ್ಲಿ ನರೇಗಾ ಯೋಜನೆಯ ಕಾರ್ಮಿಕರನ್ನು ನಿಯೋಜಿಸಲಾಗಿದೆ ಎಂದು ಆರೋಪಿಸಿ ಕೂಲಿಕಾರರು ಈಚೆಗೆ ಗಂಗಾವತಿಯ ತಾಲ್ಲೂಕು ಪಂಚಾಯಿತಿ ಮುಂದೆ ಧರಣಿ ನಡೆಸಿದರು   

ಗಂಗಾವತಿ: ಸೂಕ್ತವಲ್ಲದ ಹಾಗೂ ಅಸುರಕ್ಷಿತ ಕೆಲಸಕ್ಕೆ ನಿಯೋಜನೆ ಮಾಡಿದ್ದರಿಂದ ಕೂಲಿಕಾರ್ಮಿಕ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಆರೋಪಿಸಿ ಹೊಸಳ್ಳ ಗ್ರಾಮದ ಕೂಲಿಕಾರರು ಸೋಮವಾರ ತಾಲ್ಲೂಕು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಚಿಕ್ಕಜಂತಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ಆಳೆತ್ತರದ ನೀರಿರುವ ಕಾಲುವೆ ಮತ್ತು ಕೆರೆಗಳಲ್ಲಿ ಹೂಳೆ­ತ್ತಲು ಪಂಚಾಯಿತಿ ಅಭಿವೃದ್ಧಿ ಅಧಿ­ಕಾರಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದಾರೆ.

ಆದರೆ, ಅಸುರಕ್ಷಿತ ಸ್ಥಳದಲ್ಲಿ ಕೆಲಸಕ್ಕೆ ಕಾರ್ಮಿರನ್ನು ನಿಯೋಜನೆ ಮಾಡಬಾರದು ಎಂದು ಸರ್ಕಾರದ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಿದ ಯಡವಟ್ಟಿನಿಂದ ಬಾಳಮ್ಮ ಭೀಮಪ್ಪ ಎಂಬ ಮಹಿಳೆ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ಮುಖಂಡ ಎಲ್‌. ತಿಮ್ಮಣ್ಣ ದೂರಿದರು.

ಕೂಲಿಕಾರರೊಂದಿಗೆ ತಾಲ್ಲೂಕು ಪಂಚಾಯಿತಿ ಇಒ ಎಸ್.ಎನ್‌. ಮಠ, ನರೇಗಾ ಯೋಜನಾ ನಿರ್ದೇಶಕ ಮಹಾ­ಬಳೇಶ್ವರ, ಚಿಕ್ಕಜಂತಕಲ್‌ ಪಂಚಾ­ಯಿತಿ ಪಿಡಿಒ  ನಾಗೇಶ ಮತ್ತು ಜೆಇ ವಿಜಯಕುಮಾರ ಜತೆ ಚರ್ಚಿಸಿದರು. ತಾ.ಪಂ. ಸದಸ್ಯ ಶರಣೇಗೌಡ ಪೊಲೀಸಪಾಟೀಲ್‌ ಸಂಧಾನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.