ADVERTISEMENT

ಎಲ್ಲ ಪಂಥದ ಸಾಹಿತಿಗೆ ಪ್ರೋತ್ಸಾಹ

ಹಂಪಿ ವಿವಿ ಪ್ರಾಧ್ಯಾಪಕ ಮೊಗಳ್ಳಿ ಗಣೇಶ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2014, 8:49 IST
Last Updated 11 ಫೆಬ್ರುವರಿ 2014, 8:49 IST
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ದಲಿತ ಬಂಡಾಯ ಸಾಹಿತ್ಯದ ಗೋಷ್ಠಿಯಲ್ಲಿ ಹಂಪಿ ವಿವಿಯ ಡಾ.ಮೋಗಳ್ಳಿ ಗಣೇಶ ಮಾತನಾಡಿದರು
ಗಂಗಾವತಿ ತಾಲ್ಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ದಲಿತ ಬಂಡಾಯ ಸಾಹಿತ್ಯದ ಗೋಷ್ಠಿಯಲ್ಲಿ ಹಂಪಿ ವಿವಿಯ ಡಾ.ಮೋಗಳ್ಳಿ ಗಣೇಶ ಮಾತನಾಡಿದರು   

ಶ್ರೀರಾಮನಗರ, (ಗಂಗಾವತಿ): ಕನ್ನಡದ ಆದಿಕವಿ ಪಂಪನಿಂದ ಹಿಡಿದು ಅಧುನಿಕ ಕವಿಯ ವರೆಗಿನ ಎಲ್ಲ ಪ್ರಕಾರದ ಕವಿಗಳಲ್ಲಿ ದಲಿತ ಬಲಿತ ಎಂಬ ಬೇಧವಿಲ್ಲದೆ ಎಲ್ಲ ವರ್ಗಕ್ಕೂ ಸಾಹಿತ್ಯದಲ್ಲಿ ಸಮಾನತೆಯ ಅವಕಾಶ ಸಿಕ್ಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಗಳ್ಳಿ ಗಣೇಶ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶ್ರೀರಾಮನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೊಪ್ಪಳ ಜಿಲ್ಲೆಯ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿದಾನಂದ ಅವಧೂತರ ಮಂಟಪದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮುಖ್ಯವೇದಿಕೆ ಯಲ್ಲಿ ಸೋಮವಾರ ಕನ್ನಡ ದಲಿತ ಬಂಡಾ ಸಾಹಿತ್ಯದ ಗೋಷ್ಠಿಯಲ್ಲಿ ಮಾತನಾಡಿದರು.

ದಲಿತ ಸಾಹಿತ್ಯ ಅಥವಾ ಬಂಡಾಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಬಹುತೇಕ ಎಲ್ಲ ಸಮ್ಮೇಳನಗಳಲ್ಲಿ ಅವಕಾಶ ನೀಡುವ ನಿರಂತರ ಹಮ್ಮಿಕೊಳ್ಳುವ ಮೂಲಕ ಒಂದು ಪರಂಪರೆಯಂತೆ ರೂಢಿಸಿಕೊಂಡು ಬಂದಿದೆ ಎಂದು ಮೋಗಳ್ಳಿ ಪರಿಷತತ್ತಿನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿ.ಎಚ್. ನಾರಿನಾಳ ಮಾತನಾಡಿ, ದಲಿತರ ಉದ್ಧಾರ ಯಾರಿಂದಲೂ ಸಾಧ್ಯವಿಲ್ಲ. ಮೈಕೊಡವಿಕೊಂಡು ಮೇಲೆದ್ದಾಗ ಸ್ವಯಂ ಉನ್ನತ ಸಾಧ್ಯವೇ ವಿನಃ ಯಾರೋ ಬಂದು ಇನ್ಯಾರನ್ನೋ ಸಮಾಜದ ಮೂಲಕ ಮೇಲಕ್ಕೆತ್ತಲು ಯತ್ನಿಸುತ್ತಾರೆ ಎಂಬ ಆಶಾಭಾವ ಸರಿಯಲ್ಲ ಎಂದರು.

ಸಾಹಿತಿ ಅಲ್ಲಾಗಿರಿರಾಜ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಶಿಧರಗೌಡ ಪಾಟೀಲ್, ಮರಿಯಪ್ಪ ಕುಂಟೋಜಿ, ದೇವಪ್ಪ ಕಾಮದಡೊಡಿ, ಸುಕನ್ಯಾ ಮಾರುತಿ, ಕರಿಯಪ್ಪ ಢಣಾಪುರ, ಯಮನೂರಪ್ಪ ಉಪ್ಪಿನ, ಕೌಜಲಗಿ ವೇದಿಕೆಯಲ್ಲಿದ್ದರು. ಶಿ.ಕಾ ಬಡಿಗೇರ ಸ್ವಾಗತಿಸಿದರು. ಮೈಲಾರಗೌಡ ಹೊಸಮನಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.