ADVERTISEMENT

ಗಂಗಾವತಿಯಿಂದ-ಗಂಗಾವತಿಗೆ ಒಂಬತ್ತು ದಿನ!

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:00 IST
Last Updated 20 ಜನವರಿ 2011, 9:00 IST

ಗಂಗಾವತಿ: ಒಂದೊಮ್ಮೆ ಸಂದೇಶ, ಪತ್ರ ರವಾನೆಯಲ್ಲಿ ಜನರ ಮೆಚ್ಚುಗೆ, ನಂಬಿಕೆಗೆ ಪಾತ್ರವಾಗಿದ್ದ ಕೇಂದ್ರ ಸರ್ಕಾರದ ಸ್ವಾಮ್ಯದ ಭಾರತೀಯ ಅಂಚೆ ಇಲಾಖೆ, ಅಗ್ರಸ್ಥಾನ ಕಾಯ್ದು ಕೊಂಡಿತ್ತು. ಆದರೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನ ಇಂದು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ.

ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಖಾಸಗಿ ಸ್ವಾಮ್ಯದ ಕೋರಿಯರ್ ಸೇವಾ ಸಂಸ್ಥೆಗಳಿಗೆ ಹೋಲಿಸಿದರೆ, ಅಂಚೆ ಕಚೇರಿಯ ಸೇವೆ ನಿರ್ಲಕ್ಷ್ಯ ದಿಂದ ಕೂಡಿದ್ದು, ಆಮೆ ವೇಗದ್ದು ಎಂದು ಜನ ಆರೋಪಿಸುವುದಕ್ಕೆ  ಇಲ್ಲೊಂದು ಉದಾಹರಣೆಯೂ ಇದೆ.

ಸ್ಪರ್ಧೆಗೆ ತಕ್ಕಂತೆ ವೇಗ ಹೆಚ್ಚಿಸಿ ಕೊಳ್ಳಬೇಕಾದ ಇಲಾಖೆ ಮತ್ತದೇ ಓಬಿರಾಯನ ಕಾಲದ ಲೆಕ್ಕಾಚಾರ ದಲ್ಲಿದೆ. ಇಲ್ಲಿನ ಮುಖ್ಯ ಅಂಚೆ ಕಚೇರಿ ಯಿಂದ ವ್ಯಕ್ತಿಯೊಬ್ಬರು ನಗರದ ಇಲಾಖೆಯೊಂದಕ್ಕೇ ರವಾನಿಸಿದ ಪತ್ರ ತಲುಪಿಸಲು ಇಲಾಖೆ ಬರೋಬ್ಬರಿ ಒಂಭತ್ತು ದಿನ ತೆಗೆದುಕೊಂಡಿದೆ.

ಬಿ.ಬಿ. ಗೀರೆಡ್ಡಿ ಎಂಬ ವ್ಯಕ್ತಿಯೊ ಬ್ಬರು ಹೊಸಳ್ಳಿ ರಸ್ತೆಯಲ್ಲಿರುವ ಶಿಶು ಮತ್ತು ಮಹಿಳಾ ಕಲ್ಯಾಣ ಇಲಾ ಖೆಯ ಅಧಿಕಾರಿಗೆ ಕಳೆದ ಅಕ್ಟೋ ಬರ್ 26ರಂದು ಪತ್ರ ಹಾಕಿದ್ದಾರೆ. ಆದರೆ ಅಧಿಕಾರಿಯ ಕೈ ಸೇರಿದ್ದು, ನವೆಂಬರ್ 3ರಂದು.

ಅದೂ ಕೂಡ ನಾಲ್ಕಾಣೆ, ಎಂಟಾಣೆ ಮೌಲ್ಯದ ಪತ್ರವಲ್ಲ. 20 ರೂಪಾಯಿ ಮೊತ್ತ ಪಾವತಿಸಿ ಕೊಂಡು ರಿಜಿಸ್ಟರ್ಡ್ ಮಾಡಿದ ಪೋಸ್ಟ್. ಅಕ್ಟೋಬರ್ 31 ಭಾನು ವಾರ ಹೊರತು ಪಡಿಸಿದರೆ, ಮತ್ಯಾವ ರಜೆ ಬಂದಿಲ್ಲ. ಆದರೂ ಇಲಾಖೆಗೆ ನಗರದಲ್ಲಿ ಪತ್ರ ರವಾನಿಸಲು ಎಂಟು ದಿನ ಹಿಡಿದಿದೆ. 

ಈ ಹಿಂದೆ ಪಟ್ಟಣ ಪ್ರದೇಶ, ಹಳ್ಳಿ ಗಳಿಂದ ಪತ್ರ ಹಾಕಿದರೆ ಉದ್ದೇಶಿತ ಸ್ಥಳಕ್ಕೆ ರವಾನಿಸಲು ಅಂಚೆ ಇಲಾಖೆ ಕನಿಷ್ಠ ಮೂರರಿಂದ ಗರಿಷ್ಠ ಐದು ದಿನಗಳ ಕಾಲವಕಾಶ ಪಡಯುತಿತ್ತು. ಆದರೆ ಕಾಲ ಬದಲಾಗಿದೆ. ಖಾಸಗಿ ಸಂಸ್ಥೆಗಳು ಸ್ಪರ್ಧೆಯೊಡ್ಡುತ್ತಿವೆ.

ವಿಳಂಬ ಧೋರಣೆಗೆ ಬೇಸತ್ತ ಸಾರ್ವಜನಿಕರು ಇಂದು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ. ಅವು ಅಂಚೆ ಇಲಾಖೆಗಿಂತ ಕಡಿಮೆ ಹಣ ಪಡೆದು 24 ಗಂಟೆಯೊಳಗೆ ಅಂಚೆ ರವಾನಿಸುವ ಸೇವೆ ನೀಡುತ್ತಿವೆ. ಆದರೆ ಅಂಚೆ ಇಲಾಖೆ ಯಾವಾಗ ಎಚ್ಚೆತ್ತುಕೊಳ್ಳುತ್ತದೆಯೊ ನೋಡ ಬೇಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.