ಗಂಗಾವತಿ: ನಗರ ಸೇರಿದಂತೆ ತಾಲ್ಲೂಕಿನ ಕೋಟಯ್ಯಕ್ಯಾಂಪ್, ಸಂಗಾಪುರ ಮೊದಲಾದ ಗ್ರಾಮಗಳಲ್ಲಿ ಗುರುವಾರ ಡಾ.ಬಿ. ಆರ್. ಅಂಬೇಡ್ಕರ್‌ರ 120ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಂಥಾಲಯ: ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಶಾಖಾಧಿಕಾರಿ ಪರಶುರಾಮ ಮೂಲಂಗಿ ಬಾಬಾ ಸಾಹೇಬ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ನಾಯ್ಕೆ, ಶರಣಪ್ಪ ಚಳ್ಳಾರಿ, ಮಲ್ಲಿಕಾರ್ಜುನ ವಡ್ಡರಹಟ್ಟಿ, ಗಣೇಶ, ಎನ್.ಆರ್. ಜವಳಿ, ನರಸಪ್ಪ (ಕಾಕ), ಮೇಲ್ವಿಚಾರಕ ಮಹಾಂತೇಶ, ಪ್ರವೀಣ, ಶರಣೇಗೌಡ, ರಾಜೇಶ, ನಂದೇಶ, ರಮೇಶ ಗಬ್ಭೂರು, ಶ್ರೀನಿವಾಸ ಗುಂಡೂರು ಇದ್ದರು.
ಕೋಟಯ್ಯ ಕ್ಯಾಂಪ್: ತಾಲ್ಲೂಕಿನ ಕೋಟಯ್ಯಕ್ಯಾಂಪಿನಲ್ಲಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕದಿಂದ ಡಾ. ಬಿ,ಆರ್. ಅಂಬೇಡ್ಕರ್‌ರ 120ನೇ ಜನ್ಮ ದಿನಾಚರಣೆ ಆಚರಿಸಲಾಯಿತು.
ಪೂರ್ಣಚಂದ್ರ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಚಾಲನೆ ನೀಡಿದರು. ಸದಸ್ಯರಾದ ಶಿನಪ್ಪ, ಶ್ರೀಧರ, ಪ್ರಮುಖರಾದ ರಾಮಕೃಷ್ಣ, ವಿಜಯ ಕುಮಾರ, ನಿಂಗಪ್ಪ ಹೊಸಕೇರಿ, ಎಸ್‌ಡಿಎಂಸಿ ಈರಣ್ಣ, ಶ್ರೀನಿವಾಸ, ಮುದಿಯಪ್ಪ, ಕೆ. ಭೀಮರಾವ್, ದೇವಪ್ಪ ಮತ್ತಿತರರಿದ್ದರು.
ಸಂಗಾಪುರ: ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಯುವಕ ಸಂಘದಿಂದ ಆಚರಿಸಲಾದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುಂದರರಾಜು, ಎಲ್. ತಿಪ್ಪಣ್ಣ, ಮುರ್ತುಜಾಸಾಬ, ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ. ಕೃಷ್ಣ ಮತ್ತಿತರರಿದ್ದರು.
ದಲಿತ ಸಂಘರ್ಷ ಸಮಿತಿಯ ಗ್ರಾಮ ಘಟಕ ಸಂಗಾಪುರದಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್, ತೆಲಂಗಾಣ ಮಲ್ಲಿಕಾರ್ಜುನ ಬಾಬು, ಗ್ರಾಮ ಪಂಚಾಯಿತಿ ಸದಸ್ಯರಾದ ತಿಮ್ಮಣ್ಣ, ರಘು, ಅಂಜಿ, ಪ್ರಮುಖರಾದ ಹಂಪೇಶ ಆರಗೋಲ್ ಮತ್ತಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.