ADVERTISEMENT

ಗಂಗಾವತಿ ಮಾರುಕಟ್ಟೆಗೆ ಶಿರಸಿಯ ಅನಾನಸ್

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 8:42 IST
Last Updated 23 ಅಕ್ಟೋಬರ್ 2017, 8:42 IST

ಗಂಗಾವತಿ: ನಗರದ ಹಣ್ಣಿನ ಮಾರುಕಟ್ಟೆಗೆ ಭಾನುವಾರ ಶಿರಸಿಯ ಸ್ವಾದ ಹಾಗೂ ರುಚಿ ಭರಿತ ಅನಾನಸ್ (ಫೈನಾಪಲ್) ಹಣ್ಣಿನ ಅಮದಾಗಿತ್ತು. ಹಣ್ಣು ತುಂಬಿಕೊಂಡು ವಾಹನ ಬರುತ್ತಿದ್ದಂತೆಯೇ ವರ್ತಕರು ಮಗಿಬಿದ್ದು ಹಣ್ಣುಗಳನ್ನು ಸಗಟು ವ್ಯಾಪಾರಿಯಿಂದ ಖರೀದಿಸಿದರು.

‘ಶಿರಸಿಯ ಮಾರುಕಟ್ಟೆಯಲ್ಲಿ ಒಂದು ಹಣ್ಣಿಗೆ ಕೇವಲ ಹತ್ತರಿಂದ ಹದಿನೈದು ರೂಪಾಯಿ ಧಾರಣೆಯಿದೆ. ನಗರದಲ್ಲಿ ಕಿಲೋಗೆ ₹30 ಬೆಲೆಯಿದೆ. ಹೀಗಾಗಿ ಅಲ್ಲಿನ ವರ್ತಕರು ಅನಾನಸ್ ಇಲ್ಲಿಗೆ ಕಳಿಸುತ್ತಾರೆ’ ಎಂದು ಸಗಟು ವ್ಯಾಪಾರಿ ಮೊಹಮ್ಮದ್ ಹೇಳಿದರು.

‘ಸದ್ಯಕ್ಕೆ ಅನಾನಸ್‌ ಹಣ್ಣಿನ ಸೀಜನ್ ಅಲ್ಲ. ಆದರೂ ಜ್ಯೂಸ್, ಕೇಸರಿಬಾತ್, ಫ್ರೂಟ್ ಸಾಲಡ್ ಮಾಡಲು ಜನ ಈ ಹಣ್ಣು ಕೇಳುತ್ತಾರೆ. ಶಿರಸಿಯ ಹಣ್ಣನ್ನು ನಾಲ್ಕಾರು ದಿನ ಇಟ್ಟರೂ ಕೆಡದು. ಇದರಿಂದ ಹಣ್ಣಿಗೆ ಬೇಡಿಕೆ ಇದೆ’ ಎಂದು ಹಣ್ಣಿನ ವ್ಯಾಪಾರಿ ಕರಿಬಸಪ್ಪ ಕುರಿಬರ್ ಹೇಳಿದರು.

ADVERTISEMENT

ಅನಾನಸ್ ಹಣ್ಣು ಸೇವಿಸುವುದರಿಂದ ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು (ಇನ್ಸುಲಿನ್) ನಿಯಂತ್ರಣದಲ್ಲಿಡುತ್ತದೆ ಎಂಬ ಕಾರಣಕ್ಕೆ ಬಹುತೇಕ ಸಕ್ಕರೆ ರೋಗಿಗಳು ಈ ಹಣ್ಣನ್ನು ಸೇವಿಸುತ್ತಾರೆ. ಮೂರು ಟನ್ ಪ್ರಮಾಣದ ಹಣ್ಣು ಕೇವಲ ಅರ್ಧ ಗಂಟೆಯಲ್ಲಿ ವಹಿವಾಟು ನಡೆದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.