ADVERTISEMENT

ಗಂಭೀರತೆ ಕಳೆದುಕೊಂಡ ಆಚರಣೆ: ಬೇಸರ

ರೈತ ದಿನಾಚರಣೆ ಇಂದು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 7:12 IST
Last Updated 23 ಡಿಸೆಂಬರ್ 2013, 7:12 IST

ಕುಷ್ಟಗಿ: ಡಿ.23ಕ್ಕೆ ಮತ್ತೆ ‘ರಾಷ್ಟ್ರೀಯ ರೈತ ದಿನ’ ಬಂದಿದೆ. ರೈತ ಮತ್ತು ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳ ಹೋರಾಟ ನಡೆಸಿ ಕೃಷಿ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮಾಜಿ ಉಪಪ್ರಧಾನಿ ದಿ.ಚೌಧರಿ ಚರಣಸಿಂಗ್‌ ಅವರ ಜನ್ಮದಿನವನ್ನು ದೇಶದಾದ್ಯಂತ ರೈತ ದಿನವನ್ನಾಗಿ ಆಚರಿಸಲಾಗುತ್ತದೆ. ಆದರೆ  ಈ ಆಚರಣೆ ಬಗ್ಗೆ ಸರ್ಕಾರಕ್ಕೆ ಗಂಭೀರತೆ ಇಲ್ಲ ಎಂಬ ಅಸಮಾಧಾನ ರೈತರದ್ದು.

ಐದು ವರ್ಷದ ಹಿಂದೆ ಕೆಲ ರೈತ ಮುಖಂಡರ ಒತ್ತಡ ದಿಂದ ಮೊದಲ ಬಾರಿಗೆ ತಾಲ್ಲೂಕು ಮಟ್ಟದಲ್ಲಿ ರೈತದಿನ ಆಚರಿಸಲಾಗಿತ್ತು. ಬಳಿಕ  ರೈತರು, ರೈತ ಮುಖಂಡರು, ಅಧಿಕಾರಿಗಳು ‘ಪ್ರಜಾವಾಣಿ’ ಬಳಿ ವ್ಯಕ್ತಪಡಿಸಿದ ಅನಿಸಿಕೆಗಳು ಹೀಗಿವೆ

ನಮ್ಗೂ ಒಂದು ದಿನ ಐತಿ
 ದಿನಾ ಮುಂಜೆನಿಂದ ಸಂಜೀತನಕ ಹೊಲ್ದಾಗ ದುಡಿಯೊ ರೈತನ ಹೆಸರಿಲೆ ಒಂದು ದಿನಾ ಆಚರಣಿ ಮಾಡ್ತಾರ ಅನ್ನೋದು ಕೇಳಿ ಭಾಳ ಹೆಮ್ಮೆ ಅನಸ್ತೈತೀರ. ಆದ್ರ ಏನು ಮಾಡೋದ್ರಿ ಎಲ್ಲಾ ದುರ್ದೈವ, ನಮ್ಮನ್ನ ಯಾರ ಕೇಳ್ತಾರಿ?
ಬಸವರಾಜ ಕಾಮನೂರು, ರೈತ, ಕಂದಕೂರು.

ಎಲ್ಲಾರಿಗೂ ಬ್ಯಾಡಾಗೀವಿ...
ಇತ್ತಿತ್ಲಾಗ ನೋಡೀರ್ರಾ ರೈತ್ರು ಎಲ್ಲಾರಿಗೂ ಬ್ಯಾಡಾಗಿವಿ. ನಮ್ಮ ಕಷ್ಟ ನಮ್ಮ ಹಿಂದ, ಹೊಸದಾಗಿ ಏನು ಆತು ಏನು ಹೋತು ಅನ್ನೋದ ಗೊತ್ತಾ ಗಂಗಿಲ್ಲ. ಒಟ್ಟಿನಮ್ಯಾಲೆ ನಮ್ಮನ್ನ ಯಾರೂ ಕೇಳೋರಿಲ್ರಿ.
ಆದಪ್ಪ ಮಂಗಳೂರು, ರೈತ, ಕುಷ್ಟಗಿ.

ನಮ್ಮನ್ನ ಮರೀತ್ಯಾರಿ..
ರಾಜಕಿ ಹೆಚ್ಚಾಗಿಂದ ರೈತರ ಬಾಳ್ವಿ ನೆಟ್ಟಗಾಗಿಲ್ರಿ, ಎಲ್ಲಾ ಅನುಕೂಲ ರಾಜಕಾರ ಣದವ್ರಿಗೇ ಆಕೈತಿ, ಈ ಅಧಿಕಾರಿ ಮಂದಿಗೆ ನಮ್ಮಂಥ ಓದು      ಬರಿ ಗೊತ್ತಿಲ್ದ ರೈತ್ರು
ನೆನಪ ಆಗತಿದ್ದಂಗಿಲ್ಲ.
ಶರಣಪ್ಪ ಕುರಿ,ರೈತ ನೆರೆಬೆಂಚಿ.

ಜಿಲ್ಲಾಧಿಕಾರಿ ಏನ್‌ ಮಾಡ್ತಾರ?
ಧಾನ್ಯ ಬೆಳೆದು ಹೊಟ್ಟೆ ತುಂಬಿಸುವುದಕ್ಕೆ ರೈತರು ಬೇಕು, ಆದರೆ ಅವರ ಸುಖ ದುಃಖ ಹಂಚಿಕೊಳ್ಳು ವುದಕ್ಕೆ ಯಾರೂ ಇಲ್ಲ. ಜಾತಿ ದಿನಾಚರಣೆಗಳಿಗೆ ಕೊಟ್ಟಷ್ಟು ಮಹತ್ವ ಸರ್ಕಾರ ರೈತರ ಹೆಸರಿನ ದಿನಾಚರಣೆಗೆ ಕೊಡುತ್ತಿಲ್ಲ. ಏಕೆಂದರೆ ರೈತರಿಗೆ ಕುಲ ಇಲ್ಲ. ಇಂಥ ವಿಷಯದಲ್ಲಿ ಜಿಲ್ಲಾಧಿಕಾರಿ ಏನು ಮಾಡುತ್ತಿರುತ್ತಾರೆಂಬುದೇ ಗೊತ್ತಾಗುತ್ತಿಲ್ಲ.
ದೇವೇಂದ್ರಪ್ಪ ಬಳೂಟಗಿ, ಉಪಾಧ್ಯಕ್ಷ,
ರಾಷ್ಟ್ರೀಯ ದಾಳಿಂಬೆ ಬೆಳೆಗಾರರ ಸಂಘ


 ಸರ್ಕಾರದಂತೆ ಅಧಿಕಾರಿಗಳು
ಕಷ್ಟಜೀವಿಗಳಾಗಿರುವ ರೈತರು ಸರ್ಕಾರದಿಂದ ನಿರ್ಲಕ್ಷಿತ ವರ್ಗ. ಸರ್ಕಾರದಂತೆ ಅಧಿಕಾ ರಿಗಳಿರುತ್ತಾರೆ, ಪ್ರತಿನಿಧಿಗಳು ತಮ್ಮ ವೈಯಕ್ತಿಕ ಲಾಭಕ್ಕೆ ಹೊಡೆದಾಡುತ್ತಾರೆ. ಕನಿಷ್ಟ ರೈತನನ್ನು ಸ್ಮರಿಸುವುದಕ್ಕಾ ದರೂ ದಿನಾಚರಣೆಗೆ ಗಂಭೀರತೆ ಬರಬೇಕು.
ಆರ್‌.ಕೆ.ದೇಸಾಯಿ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.