ADVERTISEMENT

ತೆರೆದ ಕೊಳವೆಬಾವಿ: ಆತಂಕದಲ್ಲಿ ಜನತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 8:27 IST
Last Updated 14 ಜೂನ್ 2013, 8:27 IST

ಹನುಮಸಾಗರ: ಹನುಮಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತೆರೆದ ಕೊಳವೆಬಾವಿಗಳು ಇರುವುದರಿಂದ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಹನುಮಸಾಗರದಿಂದ      ಮಾವಿನಇಟಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ತೆರೆದ ಕೊಳವೆಬಾವಿ ಬಹು ದಿನಗಳಿಂದ ಹಾಗೆಯೇ ಇದೆ.

ಈ ಹಿಂದೆ ಮಾವಿನಇಟಗಿ ಗ್ರಾಮಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಕಿರುನೀರು ಸರಬುರಾಜಿನ ಈ ಕೊಳವೆಬಾವಿಯಲ್ಲಿ ನೀರು ಕಡಿಮೆಯಾದ ಪ್ರಯುಕ್ತ ಅದರಲ್ಲಿನ ಕೊಳವೆಗಳನ್ನು ಹಾಗೂ ಮೋಟರ್ ಎತ್ತಲಾಗಿದ್ದರೂ ಅಲ್ಲಿನ ಗ್ರಾಮ ಪಂಚಾಯಿತಿ ಬಹು ದಿನಗಳಿಂದ ಕೊಳವೆಬಾವಿಯನ್ನು ಮುಚ್ಚದೆ ಹಾಗೆ ತೆರೆದು ಬಿಡಲಾಗಿದೆ.

ಅಲ್ಲದೆ ಸಮೀಪದ ಬಾದಿಮನಾಳ ಗ್ರಾಮದಿಂದ ಜಹಗೀರಗೂಡದೂರ ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದ್ಲ್ಲಲೂ ಒಂದು ತೆರೆದ ಕೊಳವೆಬಾವಿ ಇದ್ದು ಅದರಿಂದ ಪಾದಚಾರಿಗಳಿಗೆ ಆತಂಕಕ್ಕೆ ಕಾರಣವಾಗಿದೆ.

ವಿವಿಧೆಡೆ ತೆರೆದ ಕೊಳವೆ ಬಾವಿಗಳು ಸಾಕಷ್ಟು ತೊಂದರೆ ಉಂಟು ಮಾಡಿದ್ದರೂ ಈ ಭಾಗದಲ್ಲಿ ಮಾತ್ರ ಈ ವರೆಗೂ ಅಲ್ಲಲ್ಲಿ ಇಂತಹ ತೆರೆದ ಕೊಳವೆಬಾವಿಗಳು ಕಂಡು ಬರುತ್ತಿವೆ ಎಂದು ಜನ ದೂರುತ್ತಾರೆ.

ಈ ಮಾರ್ಗವಾಗಿ ಶಾಲಾ ಮಕ್ಕಳು ನಡೆದಾಡುತ್ತಾರೆ, ಜಾನುವಾರುಗಳು, ದ್ವಿಚಕ್ರವಾಹನ ಸವಾರರಿಗೂ ತುಂಬಾ ಕಿರಿಕಿರಿಯಾಗಿದೆ ಸಂಬಂಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೊಳವೆಬಾವಿ ಮುಚ್ಚುವುದಕ್ಕೆ ಯಾರೂ ಮುಂದಾಗಿಲ್ಲ ಎಂದು ಜನರು ದೂರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.