ADVERTISEMENT

ನವ ಸಾಕ್ಷರರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 6:05 IST
Last Updated 2 ಮಾರ್ಚ್ 2012, 6:05 IST

ಗಂಗಾವತಿ: ಅನಕ್ಷರತೆಯ ಪ್ರಮಾಣ ಕಡಿಮೆ ಮಾಡಿ, ಅಕ್ಷರಸ್ಥರ ಸಂಖ್ಯೆ ಹೆಚ್ಚಿಸಬೇಕೆಂಬ ಸಾಕ್ಷರತಾ ಭಾರತ-2012ರ ಗುರಿ ಸಾಧಿಸಲು ಇನ್ನು ಕೇವಲ 15 ದಿನ ಮಾತ್ರ ಬಾಕಿಯಿದ್ದು ಸೂಕ್ತ ಶ್ರಮ ವಹಿಸುವಂತೆ ಲೋಕ ಶಿಕ್ಷಣ ಸಮಿತಿಯ ತಾಲ್ಲೂಕು ಅಧಿಕಾರಿ ರಾಮಣ್ಣ ಕರೆ ನೀಡಿದರು.

ತಾಲ್ಲೂಕು ಪಂಚಾಯಿತಿ ಹಿಂದಿರುವ ಶ್ರೀ ಕೃಷ್ಣ ದೇವರಾಯ ಕಲಾಮಂದಿರದಲ್ಲಿ ಗುರುವಾರ ಸಾಕ್ಷಾರತ ಯೋಜನೆಯ ಪ್ರೇರಕ, ಉಪ ಪ್ರೇರಕ ಮತ್ತು ಕಾರ್ಯಕರ್ತರಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಪರೀಕ್ಷಾತಯಾರಿ ಕಾರ್ಯಾಗಾರದಲ್ಲಿ ಮಾತನಾಡಿದರು.

ನವಸಾಕ್ಷರರಿಗೆ ನೀಡಲಾದ ಪುಸ್ತಕದಲ್ಲಿ ಒಟ್ಟು 28 ಪಾಠಗಳಿವೆ. 18-20 ಓದಿ ಕೈಬಿಟ್ಟವರ ಮನ ಪರಿವರ್ತನೆ ಮಾಡಿಸಿ ಹೆಚ್ಚುವರಿ ನಾಲ್ಕಾರು ಪಾಠ ಓದಲು ಹೇಳಬೇಕು, ಬಳಿಕ ಮಾಚ್ 15ರಂದು ನವ ಸಾಕ್ಷರರಿಗೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯಲಿವೆ.  

ಎಸ್ಸೆಸ್ಸೆಲ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, ರಾಷ್ಟ್ರೀಯ ಮುಕ್ತ ವಿದ್ಯಾಲಯದಿಂದ ಹಿಂದಿ-ಇಂಗ್ಲಿಷ್‌ನಲ್ಲಿ ಮುದ್ರಿತ ಪ್ರಮಾಣ ಪತ್ರವನ್ನು ವಿತರಿಸಲಾಗುವುದು, ಈ ಹಿನ್ನೆಲೆ ಶಿಕ್ಷಣ ಸಮಿತಿಯ ಸಿಬ್ಬಂದಿ ಗಮನ ಹರಿಸುವಂತೆ ಮನವಿ ಮಾಡಿದರು.

ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು-ಮೂರು ಕೇಂದ್ರ ಸ್ಥಾಪಿಸಲು ಉದ್ದೇಶಿಲಾಗಿದೆ. ಪ್ರತಿ ಕೇಂದ್ರಕ್ಕೆ 350-400 ಜನ ಅಭ್ಯರ್ಥಿಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ರಾಮಣ್ಣ ಉದ್ದೇಶಿತ ಕಾರ್ಯಕ್ರಮದ ಮಾಹಿತಿ ನೀಡಿದರು.

ಬಳಿಕ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ ತುಪ್ಪದ ಮಾತನಾಡಿದರು. ತಾಲ್ಲೂಕು  ಪಂಚಾಯಿತಿ ಹಂಗಾಮಿ ಅಧ್ಯಕ್ಷೆ ಹಿರೇಹನುಮವ್ವ ಉದ್ಘಾಟಿಸಿದರು. ಸದಸ್ಯ ಸಿದ್ದಪ್ಪ ಚಳ್ಳೂರು, ಬಸವರಾಜ ಮ್ಯಾಗಳಮನಿ, ಮುಖ್ಯಗುರು ಸಂಗಳದ ಇತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.