ADVERTISEMENT

ಪೊಲೀಸ್‌ ಅಧಿಕಾರಿಗಳ ಸಂಗೀತ ಪ್ರೇಮ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 9:42 IST
Last Updated 18 ಮಾರ್ಚ್ 2014, 9:42 IST

ಹನುಮಸಾಗರ: ಜನರು ವಿವಿಧ ಒತ್ತಡಗಳಿಗೆ ಒಳಗಾಗಿರುವ ಈ ದಿನಗಳಲ್ಲಿ ಸಂಗೀತ ಹಾಡುವುದರಿಂದ ಮತ್ತು ಆಲಿಸುವುದರಿಂದ ಮನಸ್ಸಿಗೆ ಹಿತ ದೊರಕಿ ಮಾನಸಿಕವಾಗಿ ಆರೋಗ್ಯ ಹೊಂದಲು ನೆರವಾಗುತ್ತದೆ ಎಂದು ಗಾಯಕರಾಗಿರುವ ಸಿಪಿಐ ಆರ್.ಎಸ್.ಉಜನಕೊಪ್ಪ ಅಭಿಪ್ರಾಯಪಟ್ಟರು.

ಇಲ್ಲಿನ ನಿಸರ್ಗ ಸಂಗೀತ ಶಾಲೆಗೆ ಈಚೆಗೆ ಭೇಟಿ ನೀಡಿದ್ದ ಅವರು ವಿದ್ಯಾರ್ಥಿಗಳು ನುಡಿಸಿದ ಸಂಗೀತ ವಾದ್ಯಕ್ಕೆ ಮನಸೋತು ತಾಳಕ್ಕೆ ಧ್ವನಿಗೂಡಿಸಿ ಹಾಡುಗಳನ್ನು ಹಾಡಿದರು.

ಹನುಮಸಾಗರ ಪಿಎಸ್ಐ ಮೌನೇಶ್ವರ ಮಾಲಿಪಾಟೀಲ, ಕನಕಗಿರಿ ಪಿಎಸ್ಐ ಎಸ್.ಪಿ.ವೀರಣ್ಣ, ಸಂಗೀತಶಾಲೆಯ ವ್ಯವಸ್ಥಾಪಕ ಮಲ್ಲಯ್ಯ ಕೋಮಾರಿ ಇತರರು ಇದ್ದರು. ವಿನೋದ ಪಾಟೀಲ ಕ್ಯಾಶಿಯೋ ನುಡಿಸಿದರು. ಶ್ರೀಕಾಂತ ಕೊಪ್ಪದ ತಬಲಾ ಸಾಥ್‌ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.